ಉಪ್ಪಿ ಚಿತ್ರದ ಟೈಟಲ್ ಬಗ್ಗೆಯೇ ಚರ್ಚೆ

ಉಪೇಂದ್ರ ತಮ್ಮ ಸಿನಿಮಾಕ್ಕೆ ಭಿನ್ನವಾದ ಚಿಹ್ನೆಯೊಂದನ್ನು ಹೆಸರಾಗಿ ಇಟ್ಟಿದ್ದು, ಇದರ ಹೆಸರಿನ ಬಗ್ಗೆ ಅಭಿಮಾನಿಗಳು ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ.

ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್ ನಲ್ಲಿ ಯೂ ಆಕಾರದ ಒಳಗೆ ಐ ಆಕಾರವೊಂದಿದೆ. ನೋಡಲು ನಾಮದಂತೆ ಕಾಣುತ್ತಿದೆ.
ಈ ಬಗ್ಗೆ ಮಾತನಾಡಿರುವ ಉಪೇಂದ್ರ, ”ಸಿನಿಮಾದ ಹೆಸರು ಏನು ಎಂಬುದು ಜನರ ಆಲೋಚನೆಗೆ ಬಿಟ್ಟಿದ್ದು, ಸಿನಿಮಾವನ್ನು ‘ಯು’ ‘ಐ’ ಎಂದುಕೊಳ್ಳಬಹುದು, ಮೂರು ನಾಮ ಎಂದುಕೊಳ್ಳಬಹುದು. ನೀನು ಮತ್ತು ನಾನು ಎಂದು ಬೇಕಾದರು ಅಂದುಕೊಳ್ಳಿ. ಎಲ್ಲವೂ ಅವರವರ ಯೋಚನೆಗೆ ಬಿಟ್ಟಿದ್ದು” ಎಂದಿದ್ದಾರೆ.

ಸಿನಿಮಾದ ಕತೆ ಬಗ್ಗೆ ಮಾತನಾಡಿರುವ ಉಪೇಂದ್ರ, ”ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದೇನೆ. ಜನರ ಅದನ್ನು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೋ ಸಿನಿಮಾದ ಕತೆ ಹಾಗೆ ಇರಲಿದೆ” ಎಂದಿದ್ದಾರೆ ಉಪ್ಪಿ.

ಟೈಟಲ್ ನ್ನು ಜನ ಹೇಗೆ ಸ್ವೀಕರಿಸಿ ಏನು ಊಹೆ ಮಾಡುತ್ತಾರೊ ಅದರ ಆಧಾರದಲ್ಲಿಯೇ ಸಿನಿಮಾದ ಕತೆ ಕಟ್ಟಲಿದ್ದಾರೆ ಉಪೇಂದ್ರ. ಸಿನಿಮಾದ ಚಿತ್ರೀಕರಣ ಮೇ ತಿಂಗಳಿನಿಂದ ಪ್ರಾರಂಭವಾಗಲಿದೆ. ಈ ಸಿನಿಮಾವನ್ನು ಕೆಪಿ ಶ್ರೀಕಾಂತ್ ಮತ್ತು ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿನ ‘ರೈಡರ್’ ಬಳಿಕ ಲಹರಿ ಮತ್ತೊಮ್ಮೆ ಈ ಸಿನಿಮಾದ ಮೂಲಕ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ.

ಉಪೇಂದ್ರ ನಟಿಸಿರುವ ‘ತ್ರಿಶೂಲಂ’, ‘ಬುದ್ಧಿವಂತ 2’ ಹಾಗೂ ‘ಲಗಾಮ್’ ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಆರ್.ಚಂದ್ರು ನಿರ್ದೇಶನದ ದೊಡ್ಡ ಬಜೆಟ್ ಸಿನಿಮಾ ‘ಕಬ್ಜ’ದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಸುದೀಪ್ ಸಹ ನಟಿಸಿದ್ದಾರೆ.

ಉಪ್ಪಿ ತಮ್ಮದೇ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇವುಗಳ ಜೊತೆಗೆ ಉಪ್ಪಿ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ ಏಪ್ರಿಲ್ 01 ರಂದು ತೆರೆಗೆ ಬರಲಿದೆ. ಉಪ್ಪಿ ಅಭಿನಯದ ತೆಲುಗು ಸಿನಿಮಾ ‘ಗನಿ’ ಏಪ್ರಿಲ್ 8 ರಂದು ತೆರೆಗೆ ಬರುತ್ತಿದೆ.
_______

Be the first to comment

Leave a Reply

Your email address will not be published. Required fields are marked *

Translate »
error: Content is protected !!