ಕೇರಳದಲ್ಲಿ ‘ಕೆಜಿಎಫ್ 2’ ಬಿಡುಗಡೆಗೆ ವಿಶೇಷ ಕಾರ್ಯಕ್ರಮ

ಕೇರಳದಲ್ಲಿ ಯಶ್ ಅಭಿಮಾನಿಗಳು ‘ಕೆಜಿಎಫ್ 2’ ರಿಲೀಸ್ ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಕೇರಳದ ಅಲೆಪ್ಪಿಯಲ್ಲಿರುವ ಯಶ್ ಅಭಿಮಾನಿಗಳು ಅಂದು ಬೆಳಗ್ಗೆ 4 ಗಂಟೆಯಿಂದ ಕೆಜಿಎಫ್ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಬೆಳಗ್ಗೆ 4 ಗಂಟೆಗೆ ‘ಕೆಜಿಎಫ್ ಚಾಪ್ಟರ್ 1’ ಮರುಬಿಡುಗಡೆಯಾಗಲಿದೆ. ಕೆಜಿಎಫ್ ಚಾಪ್ಟರ್ 1 ನೋಡಿದ ಬಳಿಕವೇ ‘ಕೆಜಿಎಫ್ 2’ ಸಿನಿಮಾ ನೋಡಲು ಯೋಜನೆ ರೂಪಿಸಿದ್ದು, ಬೆಳಗ್ಗೆ 8 ಗಂಟೆಗೆ ‘ಕೆಜಿಎಫ್ 2’ ರಿಲೀಸ್ ಆಗಲಿದೆ.

ಕೇರಳದಲ್ಲಿ ರಿಲೀಸ್ ದಿನ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 2.30ರ ಪ್ರದರ್ಶನವನ್ನು ಅಭಿಮಾನಿಗಳಿಗಾಗಿ ಮೀಸಲಿರಿಸಲಾಗಿದೆ. ಮತ್ತೊಂದು ಪ್ರದರ್ಶನವನ್ನು ಮಾನಸಿಕವ ಹಾಗೂ ದೈಹಿಕ ವಿಶೇಷ ಚೇತನರಿಗಾಗಿ ಮೀಸಲಿರಿಸಲಾಗಿದೆ.

ಕಳೆದ ವರ್ಷ ‘ಕೆಜಿಎಫ್ 2’ ಚಿತ್ರವನ್ನು ಕೇರಳದಲ್ಲಿ ವಿತರಣೆ ಮಾಡುವ ಹಕ್ಕನ್ನು ಪೃಥ್ವಿರಾಜ್ ಸುಕುಮಾರನ್ ಪಡೆದಿದ್ದರು. ಈಗ ‘ಕೆಜಿಎಫ್ 2’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್ ಸಜ್ಜಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದಕ್ಕಾಗಿ ದೊಡ್ಡ ಪ್ರೊಡಕ್ಷನ್ ಹೌಸ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!