ಚಾರ್ಲಿ ಬಿಡುಗಡೆ ಬಗ್ಗೆ ಡೈರೆಕ್ಟರ್ ಹೇಳಿದ್ದೇನು?

‘777 ಚಾರ್ಲಿ ಸಿನಿಮಾದ ರಿಲೀಸ್‌ ದಿನಾಂಕ ಮಾ.17ರೊಳಗೆ  ತಿಳಿಸುತ್ತೇವೆ’ ಎಂದು ನಿರ್ದೇಶಕ ಕಿರಣ್‌ ರಾಜ್‌ ತಿಳಿಸಿದ್ದಾರೆ.

‘ಮಕ್ಕಳು ಸಿನಿಮಾ ನೋಡಲು ಅತ್ಯುತ್ಸಾಹದಿಂದಿದ್ದಾರೆ. ಚಾರ್ಲಿಯ ಜಗತ್ತು ಅವರಿಗೆ ಇಷ್ಟವಾಗಿಯೇ ಆಗುತ್ತದೆ. ಜೊತೆಗೆ ಫ್ಯಾಮಿಲಿ ಆಡಿಯನ್ಸ್‌ ಇಷ್ಟಪಡುವ ಅಂಶಗಳಿವೆ. ಐದು ಭಾಷೆಗಳಲ್ಲಿ ಚಿತ್ರ ಹೊರಬರುತ್ತಿರುವ ಕಾರಣ ಅಲ್ಲಿನ ಡಿಸ್ಟ್ರಿಬ್ಯೂಟರ್ಸ್‌ಗೆ ಅನನುಕೂಲವಾಗದಂತೆ ಬಿಡುಗಡೆ ದಿನಾಂಕ ನಿಗದಿಗೊಳಿಸಿದ್ದೇವೆ. ಸಿನಿಮಾ ದಿನಾಂಕ ಅಂತಿಮವಾದ ತಕ್ಷಣ ಪೋಸ್ಟರ್‌ ಬಿಡುಗಡೆ, ಅದಾಗಿ 2 ಹಾಡುಗಳ ಬಿಡುಗಡೆ, ಸಿನಿಮಾ ರಿಲೀಸ್‌ಗೂ 25 ದಿನ ಮೊದಲು ಟ್ರೈಲರ್‌ ಬಿಡುಗಡೆ ಮಾಡುತ್ತೇವೆ. ಶೀಘ್ರ ಇವನ್ನೆಲ್ಲ ಜನರಿಗೆ ತಲುಪಿಸುತ್ತೇವೆ’ ಎಂದೂ ಕಿರಣ್‌ ರಾಜ್‌ ತಿಳಿಸಿದ್ದಾರೆ.

777 ಚಾರ್ಲಿ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ, ಚಾರ್ಲಿ ಹೆಸರಿನ ನಾಯಿ, ಸಂಗೀತ ಶೃಂಗೇರಿ, ರಾಜ್‌ ಬಿ ಶೆಟ್ಟಿಮುಖ್ಯಪಾತ್ರದಲ್ಲಿದ್ದಾರೆ. ಪರಂವಃ ಸ್ಟುಡಿಯೋ ಮೂಲಕ ರಕ್ಷಿತ್‌ ಶೆಟ್ಟಿ, ಜಿಎಸ್‌ ಗುಪ್ತ ಚಿತ್ರ ನಿರ್ಮಿಸುತ್ತಿದ್ದಾರೆ.ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರಕ್ಕೆ ಕಟ್ ಆ್ಯಂಡ್ ಮ್ಯೂಟ್ ಇಲ್ಲದೇ ಯು/ಎ ಸರ್ಟಿಫಿಕೇಟ್ ದೊರೆತಿದೆ. ಆದರೆ ಈ ಚಿತ್ರವನ್ನು ವಿಶ್ವದ ಎಲ್ಲ ವಯೋಮಾನ ಜನರೂ ನೋಡಬೇಕು, ಕ್ಲೀನ್ ‘ಯು’ ಸರ್ಟಿಫಿಕೇಟ್ ಸಿಗಬೇಕು ಅನ್ನುವುದು ನಿರ್ದೇಶಕ ಕಿರಣ್‌ರಾಜ್ ಅವರ ಕನಸಾಗಿತ್ತು.

“ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ನೋಡಬೇಕು ಅನ್ನುವ ಉದ್ದೇಶದಿಂದ ಯುನಿವರ್ಸಲ್ ಅನ್ನುವ ಕಾನ್ಸೆಪ್ಟ್ ಅನ್ನು ಇಡೀ ಸಿನಿಮಾದಲ್ಲಿ ಕಟ್ಟಿದ್ದೆವು. ಆದರೆ ಚಿತ್ರದ ಆರಂಭದ ಪ್ರೋಮೋದಲ್ಲೇ ಹೇಳಿರುವಂತೆ ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಇವಿಷ್ಟೂ ಚಿತ್ರದ ಕೇಂದ್ರ ಪಾತ್ರ ಧರ್ಮನ ಲೈಫನ್ನು ಚಿತ್ರಿಸುತ್ತದೆ. ಹೀಗೆ ಬಂದಿರುವ ಸಿಗರೇಟ್ ಮತ್ತು ಬಿಯರ್ ಕಾರಣಕ್ಕೆ ಸೆನ್ಸಾರ್‌ನವರು ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಾನು ಸ್ಕ್ರಿಪ್ಟಿಂಗ್ ಸ್ಟೇಜ್‌ನಿಂದಲೇ ಸೆನ್ಸಾರ್‌ನ ಗೈಡ್‌ಲೈನ್ಸ್ ಅನ್ನು ನೋಡಿಕೊಂಡಿದ್ದೆ. ಸಿನಿಮಾದಲ್ಲೆಲ್ಲೂ ರಕ್ತ, ಹಿಂಸೆ ಇತ್ಯಾದಿಗಳಿಲ್ಲ. ನಮ್ಮ ದೃಶ್ಯಗಳಲ್ಲಿ ಬರುವ ಡ್ರಿಂಕ್ಸ್,ಯಾವುದೇ ಡ್ರಿಂಕ್ಸ್ ಬ್ರಾಂಡ್ ಅನ್ನು ಹೋಲಬಾರದು ಅಂತ ಹೊಸ ಬ್ರಾಂಡ್ ಅನ್ನೇ ಕ್ರಿಯೇಟ್ ಮಾಡಿದ್ದೆವು. ಸೆನ್ಸಾರ್ ಸಮಸ್ಯೆ ಅವಾಯ್ಡ್ ಮಾಡಬೇಕು ಅನ್ನುವ ಎಚ್ಚರ ಶುರುವಿಂದಲೇ ಇತ್ತು. ಸಿನಿಮಾವನ್ನು ಇಡಿಯಾಗಿ ನೋಡಿ ಅಂತ ಸೆನ್ಸಾರ್‌ನವರಿಗೂ ಹೇಳಿದೆ. ಆದರೆ ಅವರು ಯು/ಎ ಗೆ ಸಣ್ಣ ವ್ಯತ್ಯಾಸ ಅಷ್ಟೇ ಇರೋದು, ಹೆತ್ತವರ ಜೊತೆಗೆ ಮಕ್ಕಳೂ ನೋಡಬಹುದು, ಈಗ ಸಿಗರೇಟ್, ಡ್ರಿಂಕ್ಸ್ ಬಳಕೆಗೆ ಕೋರ್ಟ್‌ನ ಸ್ಟ್ರಿಕ್ಟ್ ರೂಲ್ ಇದೆ ಅಂತ ಹೇಳಿದಾಗ ಒಪ್ಪಿಕೊಳ್ಳೋದು ಅನಿವಾರ್ಯವಾಗಿತ್ತು” ಎಂದು ಕಿರಣ್‌ ರಾಜ್‌ ತಿಳಿಸಿದ್ದಾರೆ.

“ಇಂಥಾ ಸಿನಿಮಾ ಬೇರೆ ಭಾಷೆಗಳಲ್ಲಿ ಬಂದಿದ್ದರೆ ಯು ಸರ್ಟಿಫಿಕೇಟ್ ಸಿಕ್ತಿತ್ತು ಅನ್ನುವ ಜನರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ.  ರಿಲೀಸ್‌ಗೂ 1 ತಿಂಗಳ ಮೊದಲು ಟ್ರೈಲರ್ ಬಿಡುಗಡೆ ಮಾಡ್ತೀವಿ” ಎಂದು ಹೇಳಿದ್ದಾರೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!