ಕೆನಡಾ, ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿ ‘ಓಲ್ಡ್ ಮಾಂಕ್’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಓಲ್ಡ್ ಮಾಂಕ್’ ಸಿನಿಮಾ ಫೆಬ್ರವರಿ 25ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಕೌಟುಂಬಿಕ ಕಥೆಯೊಂದಿಗೆ ಕಾಮಿಡಿ ಇದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರಿಂದ ಎರಡನೇ ವಾರ 80 ಚಿತ್ರಮಂದಿರಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಈಗ ಚಿತ್ರತಂಡ ಮತ್ತೊಂದು ಹೆಜ್ಜೆ ಇಡುವುದಕ್ಕೆ ಮುಂದಾಗಿದ್ದು, ಸಿನಿಮಾವನ್ನೂ ವಿದೇಶದಲ್ಲಿಯೂ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
ಓಲ್ಡ್ ಮಾಂಕ್’ ಸಿನಿಮಾವನ್ನು ‘ಶ್ರೀನಿವಾಸ ಕಲ್ಯಾಣ’ ಖ್ಯಾತಿಯ ಶ್ರೀನಿ ನಿರ್ದೇಶಿಸುವುದರ ಜೊತೆಗೆ ನಟಿಸಿದ್ದಾರೆ. ಶ್ರೀನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಇತ್ತೀಚೆಗೆ ನಿಧನರಾದ ಹಿರಿಯ ನಟ ರಾಜೇಶ್ ಈಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್‌ನ ಪ್ರಮುಖ ಸಿನಿಮಾಗಳನ್ನು ವಿತರಣೆ ಮಾಡಿದ ಖ್ಯಾತಿ ಹೊಂದಿರುವ ಅಭಿಜಿತ್ ಎಂಟರ್‌ಪ್ರೈಸಸ್ ‘ಓಲ್ಡ್‌ಮಾಂಕ್’ ಸಿನಿಮಾ ವಿತರಣೆ ಮಾಡುತ್ತಿದೆ. ಇದು ಅಭಿಜಿತ್ ಎಂಟರ್‌ಪ್ರೈಸಸ್ ವಿತರಣೆ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ.
ವಿಭಿನ್ನ ರೀತಿಯ ಪ್ರಚಾರಗಳಿಂದ ‘ಓಲ್ಡ್‌ಮಾಂಕ್’ ಸಿನಿಮಾ ನಿರೀಕ್ಷೆ ಹುಟ್ಟಿಸಿತು. ಓಲ್ಡ್‌ಮಾಂಕ್ ಚಿತ್ರ ಬಿಡುಗಡೆ ಆದ ಬಳಿಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
__
Be the first to comment