ಮೊದಲಬಾರಿಗೆ 24 ಪಾತ್ರಗಳಲ್ಲಿ ರಂಗಕರ್ಮಿ ಯೋಗೇಶ್ ಮಾಸ್ಟರ್ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಕೊಡಂಕೇರಿ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾದ ಹೆಸರೇ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’. ಇತ್ತೀಚೆಗೆ ಈ ವಿಭಿನ್ನ ಪ್ರಯೋಗದ ಟೀಸರ್ ಬಿಡುಗಡೆಯಾಗಿದೆ.
ಕೆಲವು ದಿನಗಳ ಹಿಂದೆ ‘ಮೇಡ್ ಇನ್ ಚೈನಾ’ ಕರ್ನಾಟಕದ ಮೊದಲ ವರ್ಚುವಲ್ ಸಿನಿಮಾ ವಿಶಿಷ್ಟವಾಗಿದೆ ಅಂತ ಅನಿಸಿತ್ತು. ಈಗ ಒಬ್ಬನೇ ನಟ 24 ಪಾತ್ರಗಳಲ್ಲಿ ನಟಿಸಿದ ಸಿನಿಮಾ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ.
ರಂಗಕರ್ಮಿ ಯೋಗೇಶ್ ಮಾಸ್ಟರ್ ಈ ಚಿತ್ರದ 24 ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೂ ಯಾರು ಇಂತಹದ್ದೊಂದು ವಿಶಿಷ್ಟ ಪ್ರಯತ್ನದ ಅಭಿನಯಕ್ಕೆ ಕೈ ಹಾಕಿಲ್ಲ. ಈ ಚಿತ್ರದಲ್ಲಿ ಯೋಗೇಶ್ ಮಾಡ ಇವರೊಬ್ಬರೇ ಎಲ್ಲಾ ಪಾತ್ರ ನಿರ್ವಹಣೆ ಮಾಡಿದ್ದಾರೆ
ಈ ಸಿನಿಮಾ ರವೀಂದ್ರನಾಥ್ ಠಾಕೂರ್ ಅವರ ಕಾದಂಬರಿಯನ್ನು ಆಧಾರಿತ ಸಿನಿಮಾ. ಅಜ್ಜ ಅಜ್ಜಿಯಂದಿರು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಎನ್ನುವ ಕಥೆ ಹೇಳುತ್ತಿದ್ದರು.ಸಿನಿಮಾದಲ್ಲಿಯೂ ಹಾಗೆ ಅಜ್ಜಿ ಹೇಳುವ ಕಥೆಯಿಂದಲೇ ಈ ಸಿನಿಮಾ ಆರಂಭವಾಗುತ್ತದೆ. ಕಥೆ ಕೇಳುವ ಮೊಮ್ಮಗ, ತಾನೇ ಎಲ್ಲಾ ಪಾತ್ರಗಳಲ್ಲಿ ಜೀವಿಸುತ್ತಾ ಹೋಗುತ್ತಾನೆ.
Be the first to comment