ಮಾ.4ಕ್ಕೆ ‘ಯೆಲ್ಲೋ ಬೋರ್ಡ್’​ ಬಿಡುಗಡೆ

ಜಾಲಿಡೇಸ್ , ಟೈಗರ್ ಖ್ಯಾತಿಯ ಪ್ರದೀಪ್ ಅಭಿನಯದ ‘ಯೆಲ್ಲೋ ಬೋರ್ಡ್’​ ಸಿನಮಾ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬನ ಕಥೆಯನ್ನು ಆಧರಿಸಿ ಮಾಡಿದ  ಸಿನಿಮಾ ಇದು ಎಂದು ನಿರ್ದೇಶಕ ತ್ರಿಲೋಕ್ ರೆಡ್ಡಿ ಹೇಳಿದ್ದಾರೆ.

ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ ಅದ್ದೂರಿಯಾಗಿ ಮೊನ್ನೆ ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಕ್ಯಾಬ್ ಚಾಲಕರಿಗೆ ಕಿಚ್ಚ ಸುದೀಪ್ ಸನ್ಮಾನ ಮಾಡಿದರು.

ಈ ಚಿತ್ರವನ್ನು ಈಗಾಗಲೇ ಸುದೀಪ್​ ವೀಕ್ಷಣೆ ಮಾಡಿದ್ದಾರೆ.ಕಿಚ್ಚ ಸುದೀಪ್​ಗೆ  ಗೆಳೆಯರ ಬಳಗ ದೊಡ್ಡದಿದೆ. ಗೆಳೆಯರ ಬಳಗದಲ್ಲಿರುವವರಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಾರೆ ಕಿಚ್ಚ. ನಟ ಪ್ರದೀಪ್ ಕೂಡ ಸುದೀಪ್​ಗೆ ಹೆಚ್ಚು ಆಪ್ತರು. ಪ್ರದೀಪ್ ಅಭಿನಯದ ‘ಯೆಲ್ಲೋ ಬೋರ್ಡ್’​ ಸಿನಿಮಾ ರಿಲೀಸ್​ಗೆ ರೆಡಿ ಇದ್ದು, ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದಾರೆ. ಸಿನಿಮಾ ಬಗ್ಗೆ ಪ್ರದೀಪ್​ಗೆ ನಿರೀಕ್ಷೆ ಇದೆ. ಈ ಸಿನಿಮಾವನ್ನು ಈಗಾಗಲೇ ಸುದೀಪ್​ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರದೀಪ್ (Actor Pradeep)​, ‘ಈ ಸಿನಿಮಾ ಸಮಾಜದಲ್ಲಿ ಬದಲಾವಣೆ, ಸುಧಾರಣೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲು ಸಿನಿಮಾ ನೋಡಿದ್ದು  ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾ ನೋಡಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ’ ಎಂದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!