“ಅಂಜನ್”ಚಿತ್ರದ ಟ್ರೈಲರ್ ಬಿಡುಗಡೆ

ಹೊಸಬರ ’ಅಂಜನ್’ ಚಿತ್ರದ ಟ್ರೈಲರ್ ಅನಾವರಣ ಕಾರ್ಯಕ್ರಮವು ಡಾ.ಸಿ.ಅಶ್ವಥ್ ಕಲಾಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಶಾಸಕ ರವಿಸುಬ್ರಮಣ್ಯ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದರೆ ಚಿತ್ರ ನೋಡಬೇಕು ಅನಿಸುತ್ತದೆ. ಬಹುಶ: ಆಕ್ಷನ್ ಚಿತ್ರ ಇರಬಹುದು.

ಕುತೂಹಲಕಾರಿಯಾಗಿದೆ. ಅದನ್ನು ಕಾದಿಟ್ಟರೆ ಮಾತ್ರ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ನಿರ್ಮಾಪಕರು ಇದೂವರೆಗೂ ನಟನೆ, ನಿರ್ಮಾಣ ಮಾಡಿಲ್ಲ. ದೂರದ ಯೂರೋಪ್‌ನಲ್ಲಿ ಇಂಜಿನಿಯರ್ ಆಗಿದ್ದು, ಕನ್ನಡದ ಮೇಲಿನ ಅಭಿಮಾನದಿಂದ ಚಿತ್ರಕ್ಕೆ ಬಂಡವಾಳ ಹೂಡಿರುವುದಾಗಿ ತಿಳಿಸಿದ್ದಾರೆ.

ಅವರು ಹೊಸ ಕಲಾವಿದರನ್ನು ಕನ್ನಡ ನಾಡಿಗೆ ಪರಿಚಯಿಸಿದ್ದಾರೆ. ಕೋವಿಡ್ ನಂತಹ ಸಂಕ್ರಮಣ ಕಾಲದಲ್ಲಿ ಎಲ್ಲಾ ಸಂಕಷ್ಟ, ಸಮಸ್ಯೆಗಳನ್ನು ದಾಟಿಕೊಂಡು ವಾಸ್ತವ ಸ್ಥಿತಿಗೆ ತಲುಪಿದ್ದೇವೆ. ಎಲ್ಲರೂ ಕನ್ನಡ ಚಿತ್ರಗಳನ್ನು ಹೆಚ್ಚು ನೋಡಬೇಕು. ಎರಡೂವರೆ ಗಂಟೆಯಲ್ಲಿ ತೆಗೆದ ಚಿತ್ರವು, ಇದರ ಹಿಂದಿನ ಶ್ರಮ, ಯೋಜನೆ ಕೆಲಸ ಮಾಡಿದವರಿಗೆ ಮಾತ್ರ ತಿಳಿದಿರುತ್ತದೆ. ಎಲ್ಲಾ ಪ್ರಯತ್ನಗಳು ಸಪಲವಾಗಲಿ. ಚಿತ್ರವು ಎಲ್ಲರ ಮನಸ್ಸನ್ನು ಗೆಲ್ಲಲಿ ಎಂದು ಶುಭಹಾರೈಸಿದರು.

ಪ್ರಾರಂಭದಲ್ಲಿ ಹಳ್ಳಿ, ನಂತರ ಸಿಟಿಗೆ ಕತೆಯು ತೆಗೆದುಕೊಂಡು ಹೋಗುತ್ತದೆ. ಅಂಗವಿಕಲ, ಅಣ್ಣ ತಂಗಿ ಬಾಂದವ್ಯ ಮತ್ತು ರೌಡಿಗಳಾದವರ ಮನಸ್ಥಿತಿ, ಮನೆಸ್ಥಿತಿ ಹೇಗಿರುತ್ತದೆ. ಮನೆಯಲ್ಲಿ ತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ಅಣ್ಣನಾದವನು ಏನು ಮಾಡುತ್ತಾನೆ ಎಂಬ ವಿಷಯಗಳು ಇರಲಿದೆ.

ತಂಗಿಯಾಗಿ ವಿಭೀಷ ತಾಯಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ. ದರ್ಶನ್ ಸರ್‌ಗೆ ಜಿಮ್ ತರಭೇತಿದಾರನಾಗಿದ್ದರಿಂದಲೂ ನಟನಾಗಬೇಕೆಂಬ ಬಯಕೆ ಇತ್ತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಈಗ ನಾಯಕನಾಗಿದ್ದೇನೆ. ಮಾಧ್ಯಮದ ಸಹಕಾರಬೇಕೆಂದು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಅಂಜನ್ ಕೋರಿದರು.

ರಚನೆ, ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಆರ್.ಸಾಗರ್ ಹೇಳುವಂತೆ ಸಿನಿಮಾವು ಮಾಸ್,ಸೆಂಟಿಮೆಂಟ್ ಸನ್ನಿವೇಶಗಳು ಕೂಡಿದೆ. ನಾಲ್ಕು ಹಾಡುಗಳು, ಐದು ಸಾಹಸಗಳು ಇದೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ದಿ ಗಟ್ಸ್ ಆಫ್ ಹ್ಯೂಮನ್ ಅಂತ ಅಡಿಬರಹದಲ್ಲಿ ಇರುವಂತೆ ನಮ್ಮ ನಾಯಕ ಜಬರ್‌ದಸ್ತ್ ಆಗಿ ನಟಿಸಿದ್ದಾರೆ. ಹಿಂದೆ ’ಪ್ರತಿಬಿಂಬ’ ಚಿತ್ರ ನಿರ್ಮಾಣ ಮಾಡಿದ್ದೆ. ಎಂಇ ಮಾಡಿರುವ ನನಗೆ ಚಿತ್ರರಂಗ ಏನಂತ ತಿಳಿದಿರಲಿಲ್ಲ.

ನಿರ್ದೇಶಕರ ಸಹವಾಸದಿಂದ ಇಲ್ಲಿಗೆ ಬರಬೇಕಾಯಿತು. ಡಾನ್ ಆಗಿ ಬಣ್ಣ ಹಚ್ಚಿದ್ದೇನೆ. ಆದಷ್ಟು ಬೇಗನೆ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂಬುದು ನಿರ್ಮಾಪಕ ಪ್ರದೀಪ್‌ಸೋನ್ಸ್ ಅವರ ನುಡಿಯಾಗಿತ್ತು. ನಾಯಕಿ ಜೋಷಿತಾಅನೋಲ ಮಿತಭಾಷಿಯಾಗಿದ್ದರು.

ಸಂಗೀತ ಸಂಯೋಜಕ ಗೋಪಿಕಲಾಕಾರ್, ಛಾಯಾಗ್ರಹಣ ಗುರುದತ್‌ಮುಸೂರಿ, ಸಾಹಸ ಕೋಟೆರಾಜು, ನೃತ್ಯ ಮಾರುತಿ.ಎಸ್.ಪಿ ಚಿತ್ರಕ್ಕಿದೆ. ನಿರ್ದೇಶಕ ಗುರುಪ್ರಸಾದ್, ವಿತರಕ ಭಾಷಾ, ರಾಜುರೆಡ್ಡಿ, ಮೈಕೋಶಿವು ಮುಂತಾದ ಗಣ್ಯರು ಉಪಸ್ತಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!