ಕಬ್ಜಕ್ಕೆ ಬೇಕಿದೆ ಆರ್ಟಿಸ್ಟ್

ಅಭಿನಯದಲ್ಲಿ ಆಸಕ್ತಿ ಇರುವವರಿಗೆ ಉಪ್ಪಿ ಜೊತೆಗೆ ಕಬ್ಜ ಚಿತ್ರದಲ್ಲಿ ನಟಿಸಲು ಅವಕಾಶ ಲಭಿಸಿದೆ.

ಸಿನಿಮಾ ತಂಡ ಕಾಸ್ಟಿಂಗ್ ಕಾಲ್ ನಡೆಸಿದ್ದು, ಆಸಕ್ತಿ ಇರುವ ಕಲಾವಿದರಿಗೆ ಅವಕಾಶ ನೀಡಲು ಚಿತ್ರತಂಡ ಮುಂದಾಗಿದೆ. ವಿಶೇಷವಾದ ಪಾತ್ರಕ್ಕೆ ಮಾತ್ರ ಕಲಾವಿದರನ್ನು ಹುಡುಕಲಾಗುತ್ತಿದೆ.

ಕಬ್ಜ ಚಿತ್ರ ತಂಡ ಪ್ರಕಟ ಮಾಡಿರುವ ಪೋಸ್ಟರ್‌ನಲ್ಲಿ ನಟನೆಯಲ್ಲಿ ಆಸಕ್ತಿಯುಳ್ಳ ಒಬ್ಬ ಪುರುಷ ಕಲಾವಿದ ಬೇಕಾಗಿದ್ದಾರೆ ಎಂದು ಬರೆಯಲಾಗಿದೆ. 6 ಫೀಟ್ ಎತ್ತರ ಇರಬೇಕು, ವಯಸ್ಸು 35 ರಿಂದ 50ರ ಒಳಗೆ ಇರಬೇಕು. ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ.

ಚಿತ್ರದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ವಿಶೇಷ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ಅವರ ಪಾತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕಿಚ್ಚ ಸುದೀಪ್‌ ಅವರ ಚಿತ್ರೀಕರಣ ಕೂಡ ಮುಗಿದೆ. ಸುದೀಪ್‌ ಪಾತ್ರದ ಹೆಸರು ‘ಭಾರ್ಗವ ಭಕ್ಷಿ’ ಆಗಿದ್ದು, ಈ ಹೆಸರೇ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಕಬ್ಜ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.

ಕಬ್ಜ ಕನ್ನಡದ ಬಹುನಿರೀಕ್ಷೆಯ, ಬಿಗ್ ಬಜೆಟ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಉಪೇಂದ್ರ ನಾಯಕ ನಟನಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಪ್ಪಿಯ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಚಿತ್ರ ಭೂಗತ ಲೋಕದ ಕಥೆ ಹೊಂದಿದೆ.

ಕೊರೊನಾ, ಲಾಕ್‌ಡೌನ್ ಕಾರಣಕ್ಕೆ ಚಿತ್ರದ ಶೂಟಿಂಗ್ ಮುಂದೆ ಹೋಯಿತು. ಸದ್ಯ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ. ಈ ವರ್ಷ ಚಿತ್ರ ಬಿಡುಗಡೆ ಆಗಲಿದೆ.

ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟಿಸಬೇಕು ಎನ್ನುವ ಆಸಕ್ತಿ ಇರುವವರು ಕೂಡಲೇ ಚಿತ್ರತಂಡವನ್ನು ಸಂಪರ್ಕಿಸಿ ನಟನೆಯಲ್ಲಿ ಒಂದು ಕೈ ನೋಡಬಹುದಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!