ಮಾ.4ಕ್ಕೆ “ಹರೀಶ ವಯಸ್ಸು36” ತೆರೆಗೆ

“ಹರೀಶ ವಯಸ್ಸು 36′ ಸಿನಿಮಾದ ಟೈಟಲ್‌ ಈಗಾಗಲೇ ಕುತೂಹಲ ಹುಟ್ಟಿಸಿದೆ. ಹೀಗಿರುವಾಗ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಎಲ್ಲಾರಲ್ಲೂ ಮೂಡುವುದು ಸಹಜ. ಅದಕ್ಕೆ ಉತ್ತರ ಇದೊಂದು ಮದುವೆ ಕಥೆ. ಹೌದು, ಯುವಕನೋರ್ವನಿಗೆ ಮದುವೆಗೆ ಹುಡುಗಿ ಹುಡುಕುವ ಕಥೆಯನ್ನು ಮಾಡಿಕೊಂಡಿದ್ದಾರೆ ನಿರ್ದೇಶಕ ಗುರುರಾಜ್‌. ಮೂವತ್ತಾರು ವಯಸ್ಸಿನ ಹುಡುಗ ಹೆಣ್ಣು ಹುಡುಕುವ ವೇಳೆ ಹೇಗೆ ಚಡಪಡಿಸುತ್ತಾನೆ, ಆತನಿಗಾಗುವ ಅವಮಾನವೇನು, ಮುಂದೆ ಆತನಿಗೆ ಹುಡುಗಿ ಸಿಗುತ್ತಾಳಾ ಎಂಬ ಅಂಶದೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದಾರೆ.

ಈಗ “ಹರೀಶ ವಯಸ್ಸು 36′ ಚಿತ್ರದಲ್ಲಿ ಪಕ್ಕಾ ಮಂಗಳೂರು ಕನ್ನಡವನ್ನೇ ಬಳಸಿದೆ. ಈ ಹಿಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಧ್ಯಾಪಕರಾಗಿ ನಟಿಸಿದ್ದ ಯೋಗೀಶ್‌ ಈ ಚಿತ್ರದ ನಾಯಕರಾದರೆ ಶ್ವೇತಾ ಅರೆಹೊಳೆ ನಾಯಕಿ. ಉಳಿದಂತೆ ಹಿರಿಯ ನಟ ಉಮೇಶ್‌, ಪ್ರಕಾಶ್‌ ತುಮಿನಾಡು ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನೂ ಶಿರಡಿ ಸಾಯಿ ಬಾಲಾಜಿ ಫಿಲ್ಮ್ ಬ್ಯಾನರ್ ಅಡಿ ಲಕ್ಷ್ಮಿಕಾಂತ್ ಎಚ್.ವಿ.ರಾವ್, ತ್ರಿಲೋಕ್ ಝಾ, ಚಿಂತಕುಂಟ ಶ್ರೀದೇವಿ, ಆರ್ ದೀಪಾ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.ಚಿತ್ರ ಮಾರ್ಚ್‌ 4ರಂದು ತೆರೆ ಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!