ಆರ್ ಆರ್ ಆರ್ ಚಿತ್ರದ ಪ್ರಿ-ರಿಲೀಸ್ ಗೆ ಹಾಲಿವುಡ್ ಸ್ಟಾರ್

ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರವನ್ನು ದುಬೈನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಮಾಡಲು ನಿರ್ದೇಶಕ ರಾಜಮೌಳಿ ನಿರ್ಧರಿಸಿದ್ದು, ಈ ಕಾರ್ಯಕ್ರಮಕ್ಕೆ ಹಾಲಿವುಡ್ ಸೂಪರ್‌ಸ್ಟಾರ್ ಒಬ್ಬರನ್ನು ಆಹ್ವಾನಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಮಾರ್ಚ್ 25ಕ್ಕೆ ಸಿನಿಮಾ ಬಿಡುಗಡೆ ಮಾಡಲು ರಾಜಮೌಳಿ ಮುಂದಾಗಿದ್ದಾರೆ. ಮಿಷನ್ ಇಂಪಾಸಿಲ್ ಆಕ್ಷನ್ ಸಿನಿಮಾಗಳಲ್ಲಿ ನಟಿಸಿರುವ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಟಾಮ್ ಕ್ರೂಸ್ ಈಗ ಅವೆಂಜರ್ಸ್ ಸಿರೀಸ್‌ನಲ್ಲಿ ಐರನ್ ಮ್ಯಾನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ನಟನಿಗೆ ರಾಜಮೌಳಿ ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು ಬಹಳ ಸುದ್ದಿ ಮಾಡುತ್ತಿದೆ.
ಆರ್ ಆರ್ ಆರ್ ಸಿನಿಮಾ ಜನವರಿ 7ರಂದು ರಿಲೀಸ್ ಆಗಬೇಕಿತ್ತು. ಆಗ ರಾಜಮೌಳಿ ಬಾರಿ ವೆಚ್ಚದಲ್ಲಿ ಪ್ರಚಾರ ಮಾಡಿದ್ದರು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಬೇಕಾಗಿತ್ತು. ಈಗ ಮತ್ತೆ ಪ್ರಚಾರ ಆರಂಭಿಸಿದ್ದು ದುಬೈನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆಸಲಾಗಿದೆ.

ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಫೆಬ್ರವರಿ 25ಕ್ಕೆ ಬಿಡುಗಡೆಯಾಗಿದೆ. ಗಂಗೂಬಾಯಿ ಸಿನಿಮಾ ರಿಲೀಸ್ ಆದ ಬಳಿಕ ‘RRR’ ಚಿತ್ರದ ಪ್ರಚಾರ ಆರಂಭ ಆಗಲಿದೆ. ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ ಚರಣ್ ತೇಜಾ ಹಾಗೂ ಆಲಿಯಾ ಭಟ್ ಈ ಚಿತ್ರದ ಪ್ರಚಾರಕ್ಕೆ ಇಳಿಯಲಿದ್ದಾರೆ. ಈಗಾಗಲೇ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದು, ಈ ಬಾರಿ ಕೇವಲ ಪ್ರಮುಖ ನಗರಗಳಲ್ಲಿ ಪ್ರಚಾರ ಮಾಡಲಾಗುವುದು ಎನ್ನುವ ಮಾತು ಕೇಳಿ ಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!