ಕೆಜಿಎಫ್ 2 ಇಂಗ್ಲಿಷ್ ನಲ್ಲಿ ರಿಲೀಸ್ ?

ಯಶ್ ನಟನೆಯ ಕೆಜಿಎಫ್-2’‌ ಚಿತ್ರವನ್ನು ಇಂಗ್ಲಿಷ್‌ ಭಾಷೆಯಲ್ಲೂ ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದೆ ಎನ್ನುವ ಸುದ್ದಿ ಬಂದಿದೆ.

ಈಗಾಗಲೇ ಐದು ಭಾಷೆಗಳಲ್ಲಿ ಚಿತ್ರ ಸಿದ್ಧವಾಗಿದ್ದು, ಇಂಗ್ಲಿಷ್‌ನಲ್ಲೂ ರಿಲೀಸ್ ಆಗುವ ಮೂಲಕ ಹಾಲಿವುಡ್‌ ನಲ್ಲೂ ಚಿತ್ರ ಬಿಡುಗಡೆ ಮಾಡಿ ದಾಖಲೆ ಮಾಡಲು ಚಿತ್ರತಂಡ ಯೋಚಿಸಿದೆ.

ಕೆಜಿಎಫ್ 2 ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಚಿತ್ರದ‌ ಬಿಡುಗಡೆಗೆ ದಿನ ಗಣನೆ ಶುರುವಾಗಿದ್ದು, ಭಾರತದಾದ್ಯಂತ ಕೆಜಿಎಫ್ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಇಂಗ್ಲಿಷ್ ನಲ್ಲಿ ಚಿತ್ರ ಬಿಡುಗಡೆ ಆಗುವ ಸುದ್ದಿ ಹರಿದಾಡುತ್ತಿದೆ.

ಸಿನಿಮಾವು ಏಪ್ರಿಲ್ 14 ಕ್ಕೆ ತೆರೆಗೆ ಬರಲು ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯ ಇನ್ನಷ್ಟೆ ಪ್ರಾರಂಭವಾಗಬೇಕಿದೆ. ಈ ನಡುವೆ ಹೊಂಬಾಳೆ ಫಿಲಮ್ಸ್‌ ಅಭಿಮಾನಿಗಳಿಗೆ ಆಯ್ಕೆಯನ್ನು ಕೊಟ್ಟಿದ್ದು, ಅಭಿಮಾನಿಗಳು ಯಾವುದಕ್ಕೆ ಎಸ್ ಅನ್ನುತ್ತಾರೊ ಆ ಅಪ್‌ಡೇಟ್ ನ್ನು ಚಿತ್ರತಂಡ ನೀಡಲಿದೆ ಎಂದು ಹೇಳಿದೆ.

ಹೊಂಬಾಳೆ ಫಿಲಮ್ಸ್‌ ಟ್ವಿಟ್ಟರ್ ಖಾತೆಯಲ್ಲಿ ಪೋಲ್ ಹಂಚಿಕೊಳ್ಳಲಾಗಿದೆ. ‘ಕೆಜಿಎಫ್‌ 2’ ಸಿನಿಮಾದ ಯಾವ ಅಪ್‌ಡೇಟ್‌ ಬೇಕೋ ನೀವು ಮತ ಚಲಾಯಿಸಿ ಅದೇ ಅಪ್‌ಡೇಟ್ ಅನ್ನು ನಾವು ನೀಡುತ್ತೇವೆ ಎಂದು ಹೇಳಲಾಗಿದೆ. ಹಾಡು, ಟ್ರೇಲರ್ ಹಾಗೂ ಸರ್ಪ್ರೈಸ್‌ ಕೊಡಿ ಎಂಬ ಮೂರು ಆಯ್ಕೆಯನ್ನು ನೀಡಿ ಮತ ಚಲಾಯಿಸಲು ಕೋರಲಾಗಿದೆ. ಅಭಿಮಾನಿಗಳು ಅತಿ ಹೆಚ್ಚು ಮತವನ್ನು ‘ಟ್ರೇಲರ್‌’ಗೆ ನೀಡಿದ್ದಾರೆ.

ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇದ್ದು, ಸಿನಿಮಾ ಕುತೂಹಲ ಮೂಡಿಸಿದೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಸಿನಿಮಾವನ್ನು ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!