ಸಿಂಪಲ್ ಆಗಿ ಒಂದ್ ಸ್ಟೋರಿ, ಚಮಕ್ ಚಿತ್ರಗಳನ್ನು ನಿರ್ದೇಶಿಸಿರುವ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಧ್ವನಿಸುರುಳಿಯನ್ನು ಮೊನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಾಸ ವಿ. ಸೋಮಣ್ಣ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ಬಜಾರ್ ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದಾರೆ, ಚೌಕ, ಶಿವಲಿಂಗ ಚಿತ್ರಗಳಲ್ಲಿ ಪಾರವಾಳವೂ ಒಂದು ಮುಖ್ಯ ಪಾತ್ರ ವಹಿಸಿತ್ತು.
ಈ ಚಿತ್ರದಲ್ಲಿ ಪಾರಿವಾಳಗಳ ರೇಸ್ಗಳ ಹಿಂದೆ ನಡೆಯುವ ಕಥೆಯನ್ನು ಹೇಳಲು ಹೊರಟಿದ್ದೇವೆ. ಕ್ಲೈಮ್ಯಾಕ್ಸ್ನಲ್ಲಿ 500 ಪಾರಿವಾಳಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದು ಚಿತ್ರದ ಅದ್ದೂರಿತನಕ್ಕೆ ಸಾಕ್ಷಿ. ಧನ್ವೀರ್ ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮಿಂಚಲು ಹೊರಟಿದ್ದಾರೆ ಎಂದರು.ಸಮಾರಂಭದಲ್ಲಿ ನಟಿ ಅದಿತಿ ಪ್ರಭುದೇವ ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಿದ ಗೀತೆಗೆ ಸ್ಟೆಪ್ಸ್ ಹಾಕಿದರೆ, ನಾಯಕ ನಟ ಧನ್ವೀರ್ ಚಿತ್ರದ ಡೈಲಾಗ್ ಹೇಳಿ ಚಪ್ಪಾಳೆ ಗಿಟ್ಟಿಸಿದರು.
ದರ್ಶನ್ ಮಾತನಾಡಿ, ಚಿತ್ರರಂಗಕ್ಕೆ ಇತ್ತೀಚೆಗೆ ಹೊಸಬರು ಬರುತ್ತಿರುವುದು ಸ್ವಾಗತ. ಈ ಚಿತ್ರದ ನಾಯಕ ಧನವೀರ್ಗೂ ಉತ್ತಮ ಭವಿಷ್ಯವಿದೆ. ನಿರ್ದೇಶಕರು ಪಾರಿವಾಳ ರೇಸ್ನ ಹಿನ್ನೆಲೆಯಿರುವ ರೌಡಿಸಂ ಕತೆಯನ್ನು ಹೇಳಲು ಹೊರಟಿದ್ದು, ಮೂವತ್ತು ವರ್ಷಗಳ ಕೆಳಗೆ ನಾನು ಕೂಡ ಪಾರಿವಾಳವನ್ನು ಸಾಕಿದ್ದೆ. ಸಿಂಪಲ್ ಸುನಿ ಅವರು ಈಗಾಗಲೇ ಉತ್ತಮ ಚಿತ್ರಗಳನ್ನು ನೀಡಿದ್ದಾರೆ, ಬಜಾರ್ ಚಿತ್ರವು ಅದೇ ಸಾಲಿಗೆ ಸೇರುವಂತಾಗಲಿ ಎಂದು ಹಾರೈಸಿದರು.ಚಿತ್ರದ ನಿರ್ಮಾಪಕ ಹಾಗೂ ನಾಯಕ ಧನವೀರ್ ತಂದೆ ತಿಮ್ಮೆಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಾರ್ಯಕಾರಿ ನಿರ್ಮಾಪಕ ಶಿವಧ್ವಜ್ ಮಾತನಾಡಿ ಚಿತ್ರದ ವಿಶೇಷತೆಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಬಿಚ್ಚಿಟ್ಟರು. ನಂತರ ನಟ ದರ್ಶನ್ ಬಜಾರ್ ಚಿತ್ರದ ಟೀಸರ್ ಹಾಗೂ ಆಡಿಯೋ ಅನಾವರಣಗೊಳಿಸಿದರು. ಬಜಾರ್ ಚಿತ್ರವು ಗೆಲ್ಲುವ ಮೂಲಕ ಧನವೀರ್ ಸ್ಯಾಂಡಲ್ವುಡ್ನಲ್ಲಿ ಬ್ಯುಜಿ ನಟನಾಗಿ ಮಿಂಚುವಂತಾಗಲಿ ಎಂಬುದೇ ಸಿನಿಸುದ್ದಿಯ ಆಶಯ.
Pingback: DevOps Strategy
Pingback: Buy Sex Toys Online
Pingback: биржа бинанс