ಮಕ್ಕಳ ಚಿತ್ರ “ಬೆಟ್ಟದದಾರಿ”ಸದ್ಯದಲ್ಲೆ‌ ಬಿಡುಗಡೆ

ಚಂದನವನದಲ್ಲಿ ಬಹಳಷ್ಟು ಮಕ್ಕಳ ಚಿತ್ರಗಳು ಸಮಾಜದ ಮೇಲೆ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರ ಮಾಡ್ತಾನೆ ಬಂದಿದೆ. ಆ ಸಾಲಿನಲ್ಲಿ “ಬೆಟ್ಟದ ದಾರಿ” ಚಿತ್ರವೂ ಕೂಡ ಸೇರಿಕೊಂಡಿದೆ ಎನ್ನಬಹುದು. ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ರಾಜಕೀಯದ ಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ.

“ಬೆಟ್ಟದ ದಾರಿ” ಎನ್ನುವ ಮಕ್ಕಳ ಸಿನಿಮಾದ ಕತೆಯು ನೀರಿನದ್ದೆ ಆಗಿದೆ. ಕಾಲ್ಪನಿಕ ಬರದ ಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ. ಇದಕ್ಕೆ ಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ.

ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡು ಚಾಣಾಕ್ಷತನದಿಂದ ಇದಕ್ಕೆ ಪರಿಹಾರ ಕಂಡುಹಿಡಿದು ಜನರು ನಿರಾಳರಾಗುವಂತೆ ಮಾಡುತ್ತಾರೆ. ಚಿಣ್ಣರುಗಳು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ರಚನೆ,ಚಿತ್ರಕತೆ, ಸಂಭಾಷಣೆ ಬರೆದಿರುವ ಮಾ.ಚಂದ್ರು ಆಕ್ಷನ್ ಕಟ್ ಹೇಳಿದ್ದಾರೆ. ಮೂಕಹಕ್ಕಿ ನಿರ್ಮಾಣ ಮಾಡಿದ್ದ ಚಂದ್ರಕಲಾ.ಟಿ.ಆರ್ ಸಹೋದರ ಮಂಜುನಾಥ್.ಹೆಚ್.ನಾಯಕ್ ಅವರೊಂದಿಗೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಮಾ.ನಿಶಾಂತ್.ಟಿ.ರಾಠೋಡ್, ಅಲೋಕ್, ವಿಘ್ನೇಶ್‌ಭರಮಸಾಗರ, ಸೋಮನಾಥ, ಶಾಶ್ವತಿ ಸೇರಿದಂತೆ ಹದಿನಾಲ್ಕು ಮಕ್ಕಳು, ಇವರುಗಳೊಂದಿಗೆ ಹಿರಿ ಕಲಾವಿದರಾದ ರಮೇಶ್‌ಭಟ್, ಬ್ಯಾಂಕ್‌ಜನಾರ್ಧನ್, ಉಮೇಶ್ ಉಳಿದಂತೆ ಮೈಸೂರುಮಲ್ಲೇಶ್, ರಿಕ್ಕಿ, ಮಂಜುಳಾರೆಡ್ಡಿ, ಅಂಜಲಿ,ಆನಂದ್ ಮುಂತಾದವರು ನಟಿಸಿದಾರೆ.

ಡಾ.ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಮತ್ತು ಪತ್ರಕರ್ತ ವಿಜಯಭರಮಸಾಗರ ವಿರಚಿತ ಒಟ್ಟು ನಾಲ್ಕು ಗೀತೆಗಳಿಗೆ ವೀರ್‌ಸಮರ್ಥ್ ಸಂಗೀತ ಸಂಯೋಜನೆ ಇದೆ. ಛಾಯಗ್ರಹಣ ನಂದಕುಮಾರ್, ಸಂಕಲನ ಅರ್ಜುನ್, ನೃತ್ಯ ಕಂಬಿರಾಜ್ ಅವರದಾಗಿದೆ.

ಬಿಜಾಪುರ, ಕುಂದಾಪುರದ ಕಮಲಶಿಲೆ ಗುಹೆಯಲ್ಲಿ ಒಟ್ಟು 32 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಪ್ರಚಾರದ ಸಲುವಾಗಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ, ಟ್ರೇಲರ್‌ನ್ನು ತೋರಿಸಲಾಯಿತು. ಹೀರಾಲಾಲ್ ಮೂವೀಸ್ ಮುಖಾಂತರ ಸಿದ್ದಗೊಂಡಿರುವ ಸಿನಿಮಾವು ವಿತರಕ ವಿಜಯ್ ಮುಖಾಂತರ ಅತಿ ಶೀಘ್ರದಲ್ಲೆ ತೆರೆ ಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!