ಹುಡುಗರ ಬ್ರಹ್ಮಚಾರಿ ಜೀವನ ಹೇಗಿರುತ್ತದೆಂದು ಎಲ್ಲರಿಗೂ ತಿಳಿದಿದೆ. ಅದೇ ಹುಡುಗಿಯರ ಬ್ಯಾಚುಲರ್ ಲೈಫು ಯಾವ ರೀತಿ ಇರುತ್ತದೆಂದು ‘ಲೀಸ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಪ್ರಚಾರದ ಮೊದಲ ಹಂತವಾಗಿ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಟ್ರೇಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಯಿತು. ಅದರಲ್ಲೂ ತಪಸ್ವಿ ಬರೆದಿರುವ ‘ಅಮ್ಮ’ ಕುರಿತಾದ ಗೀತೆಯು ಮನಸ್ಸನ್ನು ಕದಡುತ್ತದೆ.
ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವುದು ಮುತ್ತು. ಪಾರ್ವತಿ ತಾಯಿ ಕೋರಳ್ಳಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಳಂದ ಮೂಲದ ರಾಜಕೀಯ ಧುರೀಣ ಸೂರ್ಯಕಾಂತ್.ಕೆ.ಕೋರಳ್ಳಿ ನಿರ್ಮಾಣ ಮಾಡಿರುವುದು ಹೊಸ ಅನುಭವ.
ದೇವಿಶ್ರೀ, ಮುತ್ತು, ದಯಾನಂದ ಹಾಗೂ ಅವಿನಾಶ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.
ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅವ್ಯವಸ್ಥೆ (ಡಿಸ್ ಆರ್ಡರ್) ಎನ್ನುವುದು ಇರುತ್ತದೆ. ಅದೇ ರೀತಿ ಮಹಿಳಾ ಪ್ರಧಾನ ಕಥಾ ನಾಯಕಿ ಲೀಸ ಇಂತಹುದಕ್ಕೆ ಒಳಗಾಗಿರುತ್ತಾಳೆ. ಹಾಗಂತ ಇದನ್ನು ಖಾಯಿಲೆ ಎನ್ನಲು ಆಗುವುದಿಲ್ಲ. ಈ ತರಹದ ಗುಣವುಳ್ಳವರು ದುಶ್ಚಟಗಳಿಗೆ ಯಾವ ರೀತಿ ವ್ಯಸನಿಗಳಾಗುತ್ತಾರೆ. ಅದರಿಂದ ಅವರುಗಳು ಏನೇನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೊನಗೆ ವೈದ್ಯರ ಸಲಹೆ ಪಡೆದುಕೊಂಡು ಯಾವ ರೀತಿ ಹೊರಗಡೆ ಬರುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಐವರು ಹುಡುಗಿಯರ ಸುತ್ತ ಸಿನಿಮಾವು ಸಾಗುತ್ತದೆ. ನಿರ್ದೇಶಕರು ಇದಕ್ಕಂದೆ ಸಂಶೋಧನೆ ನಡೆಸಿ, ಅದರಲ್ಲಿ ಸಿಕ್ಕಂತ ವಿಷಯಗಳನ್ನು ಬಳಸಿಕೊಂಡು, ಕಾಲ್ಪನಿಕ ಕಥೆಯನ್ನು ಸೃಷ್ಟಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ರೂಪನಟರಾಜ್ ಇವರೊಂದಿಗೆ ಶ್ರಾವ್ಯಗಣಪತಿ, ಮೇಘನಾರಾಮ್, ತೇಜಸ್ವಿನಿ, ಪಾರ್ವತಿ, ತಾಯಿಯಗಿ ಮಂಜುಳಾರೆಡ್ಡಿ, ಉಳಿದಂತೆ ಸಂಗೀತ, ನಿಸರ್ಗ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ಎಸ್.ಆರ್.ಪ್ರಭು-ಸುರೇಂದ್ರನಾಥ್ ಸಂಗೀತ, ಸಿನಿಟೆಕ್‌ಸೂರಿ ಛಾಯಾಗ್ರಹಣ, ಜ್ಘಾನೇಶ್ ಸಂಕಲನ, ಹಿನ್ನಲೆ ಶಬ್ದ ಅನಿಲ್.ಸಿ.ಜೆ, ನೃತ್ಯ ಕಲೈ-ಭೂಷಣ್, ಕಾಸ್ಟ್ಯೂಮ್ ಡಿಸೈನರ್ ಲಕ್ಷೀಕೃಷ್ಣ ನಿರ್ವಹಿಸಿದ್ದಾರೆ. ಬೆಂಗಳೂರು ಮತ್ತು ಬೀದರ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಮೆಚ್ಚುಗೆ ಪಡೆದುಕೊಂಡಿರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.
Super