ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಿನಿಮಾ ಜರ್ನಿ 36 ವರ್ಷ ಪೂರ್ಣ ಆಗಿದೆ.
ಕಳೆದ 36 ವರ್ಷಗಳಿಂದ ಶಿವರಾಜ್‌ಕುಮಾರ್ ಅವರು ಭಿನ್ನ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಡಾನ್ಸ್, ಫೈಟ್ ಇಂದಿಗೂ ಮಾದರಿ ಎನಿಸಿದೆ.
ಆನಂದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವಣ್ಣ, ಈಗ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಚಿತ್ರ ಭಜರಂಗಿ 2 ಚಿತ್ರಮಂದಿಗಳ ಜೊತೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿ ಯಶಸ್ವಿ ಕಂಡಿದೆ.
ಶಿವರಾಜ್‌ಕುಮಾರ್ ನಾಯಕನಾಗಿ ಬಂದ ಬಳಿಕ ಸತತ ಮೂರು ಸಿನಿಮಾಗಳನ್ನು ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೋ ಎನ್ನುವ ಭಾಜನಕ್ಕೆ ಪಾತ್ರರಾದರು. ಬಹುತೇಕ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ ಶ್ರೇಯಸ್ಸನ್ನು ಶಿವಣ್ಣ ಹೊಂದಿದ್ದಾರೆ.
ಶಿವಣ್ಣ ಅವರ 125ನೇ ಸಿನಿಮಾ ವೇದ ಇತ್ತೀಚೆಗಷ್ಟೇ ಸೆಟ್ಟೇರಿದೆ. ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವಣ್ಣ ಅವರ ವೃತ್ತಿ ಜೀವನಕ್ಕೆ ಹೊಸ ತಿರುವು ತಂದು ಕೊಟ್ಟಿತು. ಪ್ರೇಮ್ ನಿರ್ದೇಶನದ ಜೋಗಿ ಚಿತ್ರ ಅಮ್ಮ – ಮಗನ ಪ್ರೀತಿಯ ಕಥೆಯ ಮೂಲಕ ಸೂಪರ್ ಹಿಟ್ ಎನಿಸಿತು. ಇತ್ತೀಚಿನ ಟಗರು ಚಿತ್ರ ಅಪರಾಧ ಲೋಕದ ಕಥೆಯ ಹೊಸ ಆಯಾಮದ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕುರುಬನ ರಾಣಿ, ಎ ಕೆ 47 ಚಿತ್ರಗಳು ಶಿವಣ್ಣ ಅವರಿಗೆ ಸಾಕಷ್ಟು ಹೆಸರನ್ನು ಮಾಡಿಕೊಟ್ಟಿತು. ಪೌರಾಣಿಕ, ಕೌಟುಂಬಿಕ, ಅಪರಾಧ ಲೋಕ ಈ ರೀತಿಯ ಭಿನ್ನ ಪಾತ್ರಗಳಲ್ಲಿ ಶಿವಣ್ಣ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸದ್ಯ ವೇದ ಚಿತ್ರ ಶೂಟಿಂಗ್‌ನಲ್ಲಿ ನಟ ಶಿವರಾಜ್‌ಕುಮಾರ್ ಅವರು ಬ್ಯುಸಿ ಆಗಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಲ್ಲಿ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಶಿವಣ್ಣ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
Be the first to comment