ಸ್ಯಾಂಡಲ್ವುಡ್ ನಟ ಧನ್ವೀರ್ ಹಾಗೂ ಶ್ರೀಲೀಲಾ ಅಭಿನಯದ ಸಿನಿಮಾ ‘ಬೈ ಟೂ ಲವ್’ ರಿಲೀಸ್ ಆದ ಬೆನ್ನಿಗೇ ನಾಯಕ ನಟ ಧನ್ವೀರ್ ವಿವಾದಕ್ಕೆ ಸಿಲುಕಿದ್ದಾರೆ.
ನಟ ಧನ್ವೀರ್ ಬೌನ್ಸರ್ ಜೊತೆ ಸೇರಿಕೊಂಡು ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಧನ್ವೀರ್ ಬೆಂಗಳೂರಿನ ಅನುಪಮಾ ಚಿತ್ರಮಂದಿರದ ಬಳಿ ತಡ ರಾತ್ರಿ ವಿಸಿಟ್ ಹಾಕಿದ್ದರು. ಚಂದ್ರಶೇಖರ್ ಎಂಬ ಯುವಕ ಸ್ನೇಹಿತನೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಧನ್ವೀರ್ ಫೋಟೊ ತೆಗೆಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದು ಅಭಿಮಾನಿ ಚಂದ್ರಶೇಖರ್ಗೆ ಬೇಸರ ತರಿಸಿತ್ತು.
ಧನ್ವೀರ್ ಸೆಲ್ಫಿ ಕೊಡಲಿಲ್ಲ ಎನ್ನುವ ಬೇಸರವನ್ನು ಚಂದ್ರಶೇಖರ್ ಹೊರಹಾಕಿದ್ದರು. ಇದರಿಂದ ಕೋಪಗೊಂಡ ಧನ್ವೀರ್ ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಧನ್ವೀರ್ ಜೊತೆ ಅವರ ಬೌನ್ಸರ್ಸ್ ಕೂಡ ಹಲ್ಲೆ ಮಾಡಿದ್ದರು ಎಂದು ಚಂದ್ರಶೇಖರ್ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಶೇಖರ್ ನೀಡಿದ ದೂರನ್ನು ಉಪ್ಪಾರಪೇಟೆ ಪೊಲೀಸರು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಕೇಸ್ ದಾಖಲಾದ ಬಗ್ಗೆ ಧನ್ವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೈ ಟೂ ಲವ್’ ಫೆ. 18ರಂದು ರಿಲೀಸ್ ಆಗಿದೆ. ಚಿತ್ರ ಬಿಡುಗಡೆ ಬೆನ್ನಿಗೇ, ನಾಯಕ ನಟ ಮೈಮೇಲೆ ಸಮಸ್ಯೆ ಎಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
___
Be the first to comment