ವಿಜಯ ಪ್ರಕಾಶ್ ಧ್ವನಿಯಲ್ಲಿ ಬಂದಿರುವ ‘ಅಗ್ರಸೇನ’ ಚಿತ್ರದ ” ದಸರಾ ಗೊಂಬೆ ” ಹಾಡು ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಈ ಲಿರೀಕಲ್ ಸಾಂಗ್ ನ್ನು 1.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಡಿಗೆ ಎಂಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತ ರಚನೆಕಾರ ಚೇತನ್ ಕುಮಾರ್ ಆಗಿದ್ದಾರೆ.
ವೈಷ್ಣವಿ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಚಿತ್ರವನ್ನು ಮಮತಾ ಜಯರಾಮರೆಡ್ಡಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ನಿರ್ದೇಶನ ಮುರುಗೇಶ್ ಕಣಪ್ಪ ಅವರದ್ದು ಆಗಿದೆ.
ಚಿತ್ರದಲ್ಲಿ ಅಮರ್ ವಿರಾಜ್, ರಚನಾ ದಶರಥ್, ಹೆತ್ವಿಕ್ ಕೃಷ್ಣರಾಜ್, ಉಗ್ರಂ ಮಂಜು, ತಾನಿಷ್ಕ, ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಕೊರಿಯೋಗ್ರಫಿ ಭಜರಂಗಿ ಮೋಹನ್ ಅವರದ್ದು ಆಗಿದೆ. ಆನಂದ್ ಆಡಿಯೋ ಚಿತ್ರದ ಹಾಡನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ.
___





Be the first to comment