‘ಮ್ಯಾಟ್ನಿ’ ಟೀಸರ್ ರಿಲೀಸ್

ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಅಭಿನಯದ ಮ್ಯಾಟ್ನಿ ಸಿನಿಮಾದ ರೊಮ್ಯಾಂಟಿಕ್ ಟೀಸರ್ ರಿಲೀಸ್ ಆಗಿದೆ.

ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಸಿನಿಮಾ ‘ಅಯೋಗ್ಯ’ ಬಳಿಕ ಮತ್ತೆ ರಚಿತಾ ರಾಮ್ ಹಾಗೂ ಸತೀಶ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

“ಮ್ಯಾಟ್ನಿ ಟೀಸರ್ ನ್ನು ವ್ಯಾಲೆಂಟೈನ್ಸ್ ಡೇ ದಿನ ಬಿಡುಗಡೆ ಮಾಡಬೇಕು ಎಂದು ಡಿಸೈಡ್ ಮಾಡಿದ್ದೆವು. ಸಿನಿಮಾದಲ್ಲಿ ಲವ್ ಇದೆ. ಜೊತೆಗೆ ಸ್ನೇಹ, ಮದುವೆ ಹೀಗೆ ಬೇರೆ ಬೇರೆ ವಿಷಯವಿದೆ. ಪ್ರತಿಯೊಂದು ಫ್ರೇಮ್ ಕೂಡ ಇಷ್ಟೇ ಬ್ಯೂಟಿಫುಲ್ ಆಗಿರುತ್ತೆ. ಇಡೀ ಸಿನಿಮಾ ಗ್ರ್ಯಾಂಡ್ ಆಗಿರುತ್ತೆ.” ಎಂದು ನೀನಾಸಂ ಸತೀಶ್ ಹೇಳಿದ್ದಾರೆ.

“ಮ್ಯಾಟ್ನಿ ಟೀಸರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ರೆಸ್ಪಾನ್ಸ್ ಚೆನ್ನಾಗಿ ಸಿಗುತ್ತೆ ಇದೆ. ಸಿನಿಮಾ ಇನ್ನೂ ಕಂಪ್ಲೀಟ್ ಆಗಬೇಕು. ಕೇವಲ 50 ಪರ್ಸೆಂಟ್ ಶೂಟಿಂಗ್ ಆಗಿದೆ. ಇನ್ನೂ ಶೂಟಿಂಗ್ ತುಂಬಾನೇ ಇದೆ. ಸಿನಿಮಾಟೋಗ್ರಫಿ, ಪೂರ್ಣ ಅವರ ಮ್ಯೂಸಿಕ್ ತುಂಬಾನೇ ಚೆನ್ನಾಗಿದೆ” ಎಂದು ಸತೀಶ್ ಹೇಳಿದ್ದಾರೆ.

“ರಚಿತಾ ರಾಮ್ ಹಾಗೂ ನನ್ನ ಕಾಂಬಿನೇಷನ್‌ನನ್ನು ಜನ ಇಷ್ಟ ಪಡುತ್ತಾರೆ. ನಮ್ಮಲ್ಲಿ ಪ್ಯಾಷನೇಟ್ ಟೀಂ ಇದೆ. ಜನರು ಸಿನಿಮಾ ಇಷ್ಟ ಪಡುತ್ತಾರೆ ಅನ್ನುವುದು ನನ್ನ ನಂಬಿಕೆ.” ಎಂದು ಸತೀಶ್ ನೀನಾಸಂ ಹೇಳಿದ್ದಾರೆ.

ಚಿತ್ರ ಬಿಡುಗಡೆಗೆ ಇನ್ನೂ ಕೆಲವು ತಿಂಗಳು ಬಾಕಿ ಇರುವ ಕಾರಣ ಪ್ರೇಕ್ಷಕರು ಅಲ್ಲಿಯವರೆಗೆ ಕಾಯುವುದು ಅನಿವಾರ್ಯ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!