ಕೊರೋನ ಅರ್ಭಟ ಕಡಿಮೆ ಆಗುತ್ತಿರುವ ಬೆನ್ನಿಗೇ ಫೆಬ್ರವರಿ ತಿಂಗಳ ಕೊನೆಗೆ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ.
ಸರಕಾರ ಶೇ.50 ಸೀಟಿನ ನಿರ್ಬಂಧ ತೆಗೆದು ಹಾಕಿರುವ ಕಾರಣದಿಂದ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.
ಫೆಬ್ರವರಿ 18ಕ್ಕೆ ವರದ, ಗಿಲ್ಕಿ, ಬಹುಕೃತ ವೇಷo, ಬೈ ಟು ಲವ್ ಚಿತ್ರಗಳು ತೆರೆಗೆ ಬರುತ್ತಿವೆ. ವರದ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದಾರೆ. ರಾಬರ್ಟ್ ಬಳಿಕ ವಿನೋದ್ ಪ್ರಭಾಕರ್ ಅವರ ಯಾವುದೇ ಚಿತ್ರಗಳು ಬಿಡುಗಡೆ ಆಗಿಲ್ಲ. ಈ ಚಿತ್ರ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಮನರಂಜನೆ ಒದಗಿಸುವ ನಿರೀಕ್ಷೆ ಹೊಂದಲಾಗಿದೆ.
ಫೆಬ್ರವರಿ 24ಕ್ಕೆ ಏಕ್ ಲವ್ ಯಾ ಚಿತ್ರ ಬಿಡುಗಡೆ ಆಗುತ್ತಿದೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಅಂತೆಯೇ ಫೆಬ್ರವರಿ 25 ಕ್ಕೆ ಓಲ್ಡ್ ಮಾಂಕ್, ಅಘೋರ, ಮನಸಾಗಿದೆ ಚಿತ್ರಗಳು ಬಿಡುಗಡೆ ಆಗುತ್ತಿದೆ. ಶ್ರೀನಿ ನಟನೆ, ನಿರ್ದೇಶನದ ‘ಓಲ್ಡ್‌ಮಾಂಕ್’ ಚಿತ್ರದಲ್ಲಿ ಅದಿತಿ ಪ್ರಭುದೇವ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಚಿತ್ರ ಬಿಡುಗಡೆ ಆಗುತ್ತಿದೆ.
ಅದಿತಿ ಪ್ರಭುದೇವ ಅವರು ‘ರಂಗನಾಯಕಿ’ ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ಈ ಚಿತ್ರದ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿರುವುದು ವಿಶೇಷ.
ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಸಾಲು ಸಾಲು ಚಿತ್ರಗಳ ಬಗ್ಗೆ ಯಾವ ಚಿತ್ರ ಗೆಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
___







Be the first to comment