ಫೆಬ್ರವರಿಯಲ್ಲಿ ಕೆಜಿಎಫ್ 2 ಸಾಂಗ್ ಲಾಂಚ್ ?

ಕೆಜಿಎಫ್ 2 ಸಿನಿಮಾದ ಮೆಹಬೂಬಾ ಎನ್ನುವ ಹಾಡು ಫೆಬ್ರವರಿ ಕೊನೆ ವಾರದಲ್ಲಿ ಲಾಂಚ್ ಆಗಲಿದೆ ಎಂಬ ಸುದ್ದಿ ಕೇಳಿ ಬಂದಿದೆ.

ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಈ ಚಿತ್ರ ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ನಾಯಕ ರಾಕಿಂಗ್ ಸ್ಟಾರ್ ಯಶ್ ಮುಂಬೈನಲ್ಲಿ ಚಿತ್ರದ ಪ್ರಚಾರ ಕೆಲಸ ಸಂಬಂಧವಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕೆಜಿಎಫ್ 2 ಚಿತ್ರತಂಡದಿಂದ ಅಪ್ ಡೇಟ್ ಸಿಗುತ್ತದೆಯೇ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಸದ್ಯದ ಮಟ್ಟಿಗೆ ಚಿತ್ರತಂಡ ಯಾವುದೇ ಅಪ್ ಡೇಟ್ ನೀಡಿಲ್ಲ.

ಈಗಾಗಲೇ ನಾಯಕ ನಟಿ ಶ್ರೀನಿಧಿ ಅವರ ಪಾತ್ರದ ಶೂಟಿಂಗ್‌ ಮುಕ್ತಾಯ ಆಗಿದೆ. ಆದರೆ ಸಿನಿಮಾ ಚಿತ್ರೀಕರಣ ಇನ್ನೂ ಬಾಕಿ ಇದೆ. ಯಶ್‌ ಅವರ ಭಾಗದ ಚಿತ್ರೀಕರಣ ಇನ್ನೂ ಬಾಕಿ ಇದೆ. ಈ ಹಿಂದೆ ಕ್ಲೈಮ್ಯಾಕ್ಸ್‌ ಚಿತ್ರೀಕರಣವನ್ನು ಮುಗಿಸಿದ ಬಗ್ಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಪೋಸ್ಟ್‌ ಹಂಚಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಸಂಜಯ್‌ ದತ್‌ ಚಿತ್ರದ ಡಬ್ಬಿಂಗ್‌ ಮುಗಿಸಿದ್ದರು.

ಕೆಜಿಎಫ್2 ಕೆಲಸಗಳು ಭರದಿಂದ ಸಾಗುತ್ತಿವೆ.
ಕೆಜಿಎಫ್ 2 ಕಳೆದ ವರ್ಷದ ಜೂನ್‌ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಚಿತ್ರದ ಕೆಲಸಗಳು ತಡವಾಗಿದ್ದು, 2022ರ ಏಪ್ರಿಲ್ 14ಕ್ಕೆ ಚಿತ್ರ ರಿಲೀಸ್ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!