ಕ್ರಿಕೆಟಿಗ ಶ್ರೀಶಾಂತ್ ನಟನೆಯ ಪೋಸ್ಟರ್ ರಿಲೀಸ್

ಕ್ರಿಕೆಟಿಗ ಶ್ರೀಶಾಂತ್ ನಟನೆಯ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಅಭಿನಂದನೆ ವ್ಯಕ್ತವಾಗಿದೆ.

‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ಶ್ರೀಶಾಂತ್​ ಬಣ್ಣ ಹಚ್ಚಿದ್ದಾರೆ.ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್​ ಶಶಿವನ್ ಚಿತ್ರಕ್ಕೆ ಆಯಕ್ಷನ್​-ಕಟ್​ ಹೇಳುತ್ತಿದ್ದಾರೆ.

‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ಸಮಂತಾ, ನಯನತಾರಾ, ವಿಜಯ್​ ಸೇತುಪತಿ ಪ್ರಮುಖ ಪಾತ್ರಗಳನ್ನುಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶ್ರೀಶಾಂತ್​ ಬಣ್ಣ ಹಚ್ಚಿದ್ದು​ ಅವರು ಹುಟ್ಟುಹಬ್ಬವಾದ ಫೆ.7ರಂದು ‘ಕಾದು ವಾಕುಲ ರೆಂಡು ಕಾದಲ್​’ ಚಿತ್ರತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ.

ಪೋಸ್ಟರ್​ನಲ್ಲಿ ಶ್ರೀಶಾಂತ್​ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಲಾಗಿದೆ. ಮೊಹಮ್ಮದ್​ ಮೊಬಿ ಹೆಸರಿನ ಪಾತ್ರದಲ್ಲಿ ಶ್ರೀಶಾಂತ್​ ಕಾಣಿಸಿಕೊಳ್ಳಲಿದ್ದಾರೆ.

‘ಕ್ರಿಕೆಟ್​ ಮೈದಾನದಲ್ಲಿ ನಿಜವಾದ ಚಾಂಪಿಯನ್​ ಆಗಿದ್ದ ಶ್ರೀಶಾಂತ್ ಬೆಳ್ಳಿಪರದೆಯಲ್ಲಿ ಆಳ್ವಿಕೆ ಮಾಡಲಿದ್ದಾರೆ. ಶ್ರೀಶಾಂತ್​ ಅವರನ್ನು ಮೊಹಮ್ಮದ್​ ಮೊಬಿ ಆಗಿ ಪರಿಚಯಿಸುತ್ತಿದ್ದೇವೆ’ ಎಂದು ಚಿತ್ರತಂಡ ತಿಳಿಸಿದೆ.

ಶ್ರೀಶಾಂತ್ ಅವರು ಹಲವು ಜಾಹೀರಾತುಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. ಈಗ ಅವರು ಯಾವ ರೀತಿ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!