ಕ್ರೇಜಿಸ್ಟಾರ್ ರವಿಚಂದ್ರನ್ ‘ರಮ್ಯಾ ರಾಮಸ್ವಾಮಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
‘ಕನ್ನಡಿಗ’ ಸಿನಿಮಾ ನಿರ್ಮಿಸಿದ್ದ ರಾಜ್‌ಕುಮಾರ್ ಅವರು ‘ರಮ್ಯಾ ರಾಮಸ್ವಾಮಿ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎನ್.ಎಸ್.ರಾಜ್‌ಕುಮಾರ್ ಅವರು ಓಂಕಾರ್ ಫಿಲ್ಮಂಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರವಿಚಂದ್ರನ್ ‘ರಾಮಸ್ವಾಮಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಹು ದಿನಗಳ ಬಳಿಕ ಬಹಳ ದಿನಗಳಿಂದ ಗುರುದತ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಒಂದೇ ವಾರದಲ್ಲಿ ಇವರ ಎರಡು ಸಿನಿಮಾ ಸೆಟ್ಟೇರಿವೆ. ಚಿ.ಗುರುದತ್ ಕೆಲ ದಿನಗಳ ಹಿಂದೆ ಶಿವರಾಜ್ ಕುಮಾರ್ ಸಿನಿಮಾಕ್ಕೆ ನಿರ್ದೇಶನ ಮಾಡುವುದು ಘೋಷಣೆ ಆಗಿತ್ತು. ಸಂದೇಶ್ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆ ‘ದತ್ತ’, ‘ಕಾಮಣ್ಣನ ಮಕ್ಕಳು’, ‘ಕಿಚ್ಚ ಹುಚ್ಚ’ ಸಿನಿಮಾವನ್ನು ಗುರುದತ್ ನಿರ್ದೇಶನ ಮಾಡಿದ್ದಾರೆ.
ರಮ್ಯಾ ರಾಮಸ್ವಾಮಿ’ ಸಿನಿಮಾದ ಕಥೆಯನ್ನು ಜನಾರ್ಧನ ಮಹರ್ಷಿ ಬರೆದಿದ್ದಾರೆ. ಛಾಯಾಗ್ರಾಹಕ ಜಿ.ಎಸ್.ವಿ.ಸೀತಾರಾಂ, ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಕಳೆದ ವರ್ಷ ರವಿಚಂದ್ರನ್ ನಟನೆಯ ದೃಶ್ಯ2 ಚಿತ್ರ ತೆರೆ ಕಂಡಿತ್ತು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಈ ವರ್ಷ ರವಿಚಂದ್ರನ್ ಪ್ರೇಕ್ಷಕರನ್ನು ಯಾವ ರೀತಿಯ ಮೋಡಿ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
___

Be the first to comment