ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ , ಪ್ರೇಮಿಗಳ ಜೊತೆ ಕುಟುಂಬ ಸಮೇತ ನೋಡುವಂತ ಚಿತ್ರವೊಂದು ಇದೇ ಫೆಬ್ರವರಿ 11ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಹೌದು… ಈ ಚಿತ್ರದ ಶೀರ್ಷಿಕೆ ಕೇಳಿದರೆ ಪ್ರೇಮಿಗಳಿಗೆ ಸೂಕ್ತವಾದ ಶೀರ್ಷಿಕೆ ಎಂದು ಹೇಳಬಹುದು ಅದೇ “ಪ್ರೀತಿಗಿಬ್ಬರ”. ಯುವ ಪ್ರತಿಭೆಗಳು ಸೇರಿ ಸಿದ್ದಪಡಿಸಿರುವ ಈ ಚಿತ್ರವನ್ನ ಷಾಂಡಿಲ್ಯ .ಬಿ. ಟಿ ರವರು ಕಥೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದು , ಮೂಲತಃ ಬಿಲ್ಡರ್ ಆಗಿರುವ ಬಿ.ಬಾಲಾಜಿ ಬೊರ್ಲಿಗೊರ್ಲ ಅವರು ಅಕ್ಷತಾ ಮೂವೀಸ್ ಮೂಲಕ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಪ್ರೀತಿ , ಪ್ರೇಮದ ಸುತ್ತ ಹಲವಾರು ಚಿತ್ರಗಳು ಬಂದುಹೋಗಿವೆ. ಆ ನಿಟ್ಟಿನಲ್ಲಿ ಈ ಚಿತ್ರವು ಹಳ್ಳಿ ಸೊಗಡಿನ ಪ್ರೀತಿ ಹಾಗೂ ಸಂಬಂಧದ ಎಳೆಯನ್ನು ತೆರೆದಿಡಲಿದೆಯಂತೆ. ಹಳ್ಳಿಯ ಪರಿಸರದಲ್ಲಿ ಬೆಳೆದ ಮುದ್ದಾದ ಎರಡು ಜೋಡಿಗಳ ಪ್ರೇಮಕಥೆ. ಕೆಲವು ಕಷ್ಟಕರ ಸನ್ನಿವೇಶದಲ್ಲಿ ಪ್ರೇಮಿಗಳು ತಮ್ಮ ಬದುಕಿನಲ್ಲಿ ಒಂದಾಗಾತ್ತಾರೋ ಇಲ್ಲವೋ ಎಂದು ತೋರಿಸುವ ಜೊತೆಗೆ ಜಾತಿ ಧರ್ಮದ ವಿಷ ಬೀಜವೂ ಕೂಡ ಕಾಣಲಿದೆಯಂತೆ.
ಇದಲ್ಲದೆ ಖಡಕ್ಕಾಗಿ ಖದರ್ ಲುಕ್ ನಲ್ಲಿ ಇಬ್ಬರು ಹೆಣ್ಣು ಮಕ್ಕಳು ಖಳನಾಯಕಿಯರಾಗಿ ಅಬ್ಬರಿಸಳಿದ್ದಾರoತೆ. ಈ ಚಿತ್ರದಲ್ಲಿ ಬಹಳಷ್ಟು ಯುವ ಪ್ರತಿಭೆಗಳ ಅಭಿನಯಿಸಿದ್ದು , ಅನುಭವಿ ಕಲಾವಿದರ ಸಹಕಾರವು ತಂಡಕ್ಕೆ ಸಿಕ್ಕಿದೆಯಂತೆ. ನಾಯಕನಾಗಿ ಗೋವಿಂದ ಹಾಗೂ ನಾಯಕಿಯಾಗಿ ನಿರೋಷ ಶೆಟ್ಟಿಗೆ ಅಭಿನಯಿಸಿದ್ದಾರೆ.
ಇನ್ನು ಖಳನಾಯಕಿರಾಗಿ ಮಂಜುಳಾ ಮತ್ತು ಕಾವ್ಯ ಪ್ರಕಾಶ್ ಕಾಣಿಸಿಕೊಂಡರೆ, ಉಳಿದಂತೆ ಚಿರಾಗ್ , ಶೈಲೇಶ್, ಸಂದೀಪ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅನುರಾಗ್ ರೆಡ್ಡಿ ಸಂಗೀತ , ಹಿನ್ನಲೆ ಸಂಗೀತ ಎ.ಟಿ.ರವೀಶ್, ಛಾಯಾಗ್ರಹಣ ರಮೇಶ್ಗೌಡ, ಸಂಕಲನ ಅರ್ಜುನ್ಕಿಟ್ಟು , ಸಾಹಿತ್ಯ ಡಾ.ದೊಡ್ಡರಂಗೇಗೌಡ, ಸಾಹಸ ಆರ್ಯನ್ ಶ್ರೀನಿವಾಸನ್-ಅಶೋಕ್, ನೃತ್ಯ ಪ್ರವೀಣ್ ಅವರದಾಗಿದೆ. ಸದ್ಯ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಹಳ್ಳಿ ಸೊಗಡಿನ ಈ ವಿನೂತನ “ಪ್ರೀತಿಗಿಬ್ಬರು” ಚಿತ್ರ ಇದೇ ಫೆಬ್ರವರಿ 11 ರಿಂದ ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರಲು ಸನ್ನದ್ಧವಾಗಿದೆ
Be the first to comment