ರಾಜಕೀಯದತ್ತ ನಿರ್ದೇಶಕ ಎಸ್ ನಾರಾಯಣ್

ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅವರು ರಾಜಕೀಯದತ್ತ ಒಲವು ತೋರಿಸಿ ಕಾಂಗ್ರೆಸ್ ಪಕ್ಷದ ಸೇರ್ಪಡೆಗೆ ಮುಂದಾಗಿದ್ದಾರೆ.

ಎಸ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಸಿದ್ಧಾಂತ ಒಪ್ಪಿ ನಾರಾಯಣ್ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಎಸ್.ನಾರಾಯಣ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚೈತ್ರದ ಪ್ರೇಮಾಂಜಲಿ ನಿರ್ದೇಶನದ ಸಿನಿಮಾ ವೃತ್ತಿ ಜೀವನ ಆರಂಭಿಸಿದರು. ಡಾ.ರಾಜ್‍ಕುಮಾರ್ ಅವರ ಶಬ್ಧವೇದಿ, ಡಾ.ವಿಷ್ಣುವರ್ಧನ್ ಅವರ ವೀರಪ್ಪ ನಾಯಕ ಸೇರಿದಂತೆ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ನಾರಾಯಣ್ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ. ಸುಮತಿ, ಭಾಗೀರತಿ, ಅಂಬಿಕಾ, ದುರ್ಗ, ಪಾರ್ವತಿ, ಚಂದ್ರಿಕಾ, ಸೂರ್ಯವಂಶ, ವೈಶಾಲಿ, ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿರುವ ನಾರಾಯಣ್ ಅವರು ಯಾವ ರೀತಿ ಯಶಸ್ಸು ಕಾಣುತ್ತಾರೆ ಎಂದು ಕಾದು ನೋಡಬೇಕಿದೆ.

ಸಿನಿಮಾ ಕ್ಷೇತ್ರದಿಂದ ಬಂದ ಅಂಬರೀಶ್, ಶಶಿ ಕುಮಾರ್, ಉಮಾಶ್ರೀ, ಸುಮಲತಾ, ಶೃತಿ, ತಾರಾ, ಮಾಳವಿಕಾ ಅವಿನಾಶ್ ರಾಜಕೀಯದಲ್ಲಿ ಯಶಸ್ಸು ಕಂಡರು. ನಾರಾಯಣ್ ಅವರು ಯಾವ ರೀತಿ ಮೋಡಿ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!