ವಿಹಾನಾ ಫ್ಯಾಷನ್ ವತಿಯಿಂದ ಗಣರಾಜ್ಯೋತ್ಸವ ದಿನದಂದು ಸೆಲೆಬ್ರಿಟಿಗಳಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಕ್ಯಾಲೆಂಡರ್ ನಲ್ಲಿ FIMS (fashion information management system) ಕುರಿತ ಆ್ಯಪ್ ಬಗ್ಗೆ ಅನಾವರಣ ಮಾಡಲಾಯಿತು. ಈ ವೇಳೆ ವಿಹಾನಾ ಫ್ಯಾಷನ್ ಮಾಲೀಕ ಪ್ರಶಾಂತ್ ಮಾನೆ ಇದ್ದರು.
ಹೊಸ ಆ್ಯಪ್ ಬಗ್ಗೆ ಮಾಹಿತಿ ನೀಡಿದ ಪ್ರಶಾಂತ್ ಮಾನೆ ಅವರು, ” FIMS (fashion information management system) ಕುರಿತ ಆ್ಯಪ್ ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಇಲ್ಲಿ ಟೈಲರ್ ಗಳ, ಡಿಸೈನ್ ಗಳ ಮಾಹಿತಿ ಇರುತ್ತದೆ. ಇದರಿಂದ ಗ್ರಾಹಕರು ತಮಗೆ ಬೇಕಾದ ಡಿಸೈನ್ ಪಡೆಯಲು, ಟೈಲರ್ ಗಳನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
” ಆ್ಯಪ್ ನಲ್ಲಿ ಯಾವುದೇ ಡಿಸೈನ್ ಸೇವ್ ಮಾಡಿ ಇಡಬಹುದು. ಈ ಬಗ್ಗೆ ಟೈಲರ್ ಗಳನ್ನು ಸಂಪರ್ಕಿಸಿ ತಮಗೆ ಬೇಕಾದ ವಿನ್ಯಾಸವನ್ನು ಪಡೆದುಕೊಳ್ಳುವ ವ್ಯವಸ್ಥೆ ಇದೆ. ಟೈಲರ್ ಗಳ ಜೊತೆ ಚಾಟ್ ಕೂಡಾ ಮಾಡಬಹುದು. ಯಾರು ಯಾವ ರೀತಿಯ ವಿನ್ಯಾಸ ಮಾಡುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ” ಎಂದು ತಿಳಿಸಿದರು.
” ಇಂದು ಹಲವು ಕಡೆ ಅಂತರ್ ಧರ್ಮೀಯ, ಅಂತರ್ ರಾಜ್ಯ ಮದುವೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಈ ಆ್ಯಪ್ ನ ಉಪಯೋಗ ಪಡೆಯಬಹುದು. ಕಾಶ್ಮೀರಿ ಬಟ್ಟೆ ಬೇಕಾದರೆ ಕಾಶ್ಮೀರಕ್ಕೆ ಹೋಗುವ ಅಗತ್ಯ ಇಲ್ಲ. ಈ ಆ್ಯಪ್ ಮೂಲಕ ಕಾಶ್ಮೀರದ ಡಿಸೈನ್ ಮಾಡುವ ಟೈಲರ್ ಗಳನ್ನು ಸಂಪರ್ಕಿಸಬಹುದು. ಅವರ ಜೊತೆ ಚಾಟ್ ಮಾಡಿ ಗ್ರಾಹಕರು ತಮಗೆ ಬೇಕಾದ ವಿನ್ಯಾಸವನ್ನು ಮಾಡಿಸಿಕೊಳ್ಳಬಹುದು. ಕೊರಿಯರ್ ಮೂಲಕ ಮನೆ ಬಾಗಿಲಿಗೆ ಬಟ್ಟೆ ತಲುಪುತ್ತದೆ. ಆನ್ಲೈನ್ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಇಲ್ಲಿದೆ” ಎಂದು ಹೇಳಿದರು.
” ಈ ಆ್ಯಪ್ ನಲ್ಲಿ ಆಲ್ಟರ್ ನೇಶನ್ ಕೂಡಾ ಮಾಡಿಸಿಕೊಳ್ಳಬಹುದು. ಬೊಂಟಿಕ್ ಮಾಡುವವರ ಸಂಪರ್ಕ ಸಂಖ್ಯೆ ಕೂಡಾ ಲಭ್ಯ. ಗ್ರಾಹಕರು ಈ ಆ್ಯಪ್ ಪ್ರಯೋಜನ ಪಡೆದು ಕೊಳ್ಳಲು ಮುಂದಾಗಬೇಕು” ಎಂದು ಕೋರಿದ್ದಾರೆ.
Be the first to comment