ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವಣ್ಣ ನಟನೆ

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡುವುದು ಖಚಿತ ಆಗಿದೆ.

ಚಿತ್ರ ಅದ್ಧೂರಿಯಾಗಿ ನಿರ್ಮಾಣ ಆಗಲಿದೆ. ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ಚಿತ್ರದ ಟೈಟಲ್ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

ಚಿತ್ರತಂಡ ಸಿನಿಮಾದ ತಾಂತ್ರಿಕ ವರ್ಗ ಹಾಗೂ ಕಥೆಯ ಬಗ್ಗೆ ಮಾಹಿತಿ ನೀಡಿದೆ. ಚಿತ್ರದ ನಿರ್ದೇಶಕ ಆರ್ ಜೈರಾಮ್ ಸಿನಿಮಾಕ್ಕಾಗಿ 70 ರ ದಶಕದಲ್ಲಿ ನಡೆಯುವ ಕಥೆ ಸಿದ್ಧ ಮಾಡಿಕೊಂಡಿದ್ದಾರೆ. ಇದು ಶಿವಣ್ಣ ಇಮೇಜ್‌ಗೆ ತಕ್ಕ ಕಥೆ ಆಗಿದೆ ಎನ್ನಲಾಗಿದೆ. ಚಿತ್ರದಲ್ಲಿ ರೆಟ್ರೋ ಮಾದರಿಯ ಕತೆಯಲ್ಲಿ ಶಿವಣ್ಣ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾದ ನಿರ್ದೇಶಕ ಜಯರಾಮ್ ಈಗಾಗಲೇ ಉಪೇಂದ್ರ ಜೊತೆ ಕೆಲಸ ಮಾಡಿದ್ದಾರೆ. ಜಯರಾಮ್ ಹೇಳಿದ ಕಥೆ ಶಿವರಾಜ್‌ಕುಮಾರ್‌ಗೆ ಇಷ್ಟ ಆಗಿದ್ದು, ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಸಿನಿಮಾ ಅನೌನ್ಸ್ ಮಾಡಲಾಗಿದೆ. ಈ ಸಿನಿಮಾ ಮೂಲಕ ನಿರ್ದೇಶಕರು ತಮ್ಮ ಹೆಸರನ್ನು ಆರ್ ಜೈ ಎಂದು ಬದಲಾಯಿಸಿಕೊಂಡಿದ್ದಾರೆ.

ಚಂದನ್ ಶೆಟ್ಟಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದ ಆಲ್ಬಂ ಹಾಡು ‘ಲಕ ಲಕ ಲ್ಯಾಂಬೊರ್ಗಿನಿ’ ನಿರ್ಮಿಸಿದ್ದ ನಿರ್ಮಾಪಕ ಕೇಶವ್ ಅವರು ಪ್ಯಾನ್‌ ಇಂಡಿಯಾಗೆ ಹಣ ಹೂಡುತ್ತಿದ್ದಾರೆ.

ಕನ್ನಡದ ಬಹುತೇಕ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಶ್, ಸುದೀಪ್, ದರ್ಶನ್, ಧ್ರುವ ಸರ್ಜಾ, ಉಪೇಂದ್ರ ಸೇರಿದಂತೆ ಬಹುತೇಕ ನಟರು ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ವೃತ್ತಿ ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಈಗ ಶಿವರಾಜ್‌ಕುಮಾರ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ಉಂಟು ಮಾಡಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!