48ಕ್ಕೆ ಕಾಲಿಟ್ಟ ಹೃತಿಕ್: ಹೊಸ ಲುಕ್ ಔಟ್

ಬಾಲಿವುಡ್​ನ ಗ್ರೀಕ್ ದೇವರ ಅವತಾರ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ ಇಂದು 48ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

‘ಗ್ರೀಕ್ ಗಾಡ್’ ಎಂದೇ ಖ್ಯಾತಿ ಪಡೆದಿರುವ ಹೃತಿಕ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎನಿಸಿದ್ದಾರೆ. ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

2000ನೇ ಇಸವಿಯಲ್ಲಿ ತಂದೆ ರಾಕೇಶ್ ರೋಶನ್ ನಿರ್ದೇಶಿಸಿದ್ದ ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಹೃತಿಕ್ ರೋಷನ್ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ಮೂಲಕ ಅವರು ಚಾಕೋಲೇಟ್ ಹೀರೊ ಎನಿಸಿಕೊಂಡರು.
ಧೂಮ್ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಅಂತೆಯೇ ಹೃತಿಕ್ ರೋಷನ್​ ಕ್ರಿಶ್ ಸಿನಿಮಾದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದರು.

ಇಲ್ಲಿವರೆಗೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೃತಿಕ್ ರೋಷನ್ ಪಡೆದಿದ್ದಾರೆ. ಹೃದಯಸ್ಪರ್ಶಿ ನಟನೆ, ನೃತ್ಯ, ದೇಹದಾಧ್ಯತೆಯ ಮೂಲಕ ಗಮನ ಸೆಳೆದಿರುವ ಹೃತಿಕ್ ರೋಷನ್ ಪ್ರೇಕ್ಷಕರನ್ನು ರಂಜಿಸುವ ಕಲೆಗಾರ ಎನಿಸಿಕೊಂಡಿದ್ದಾರೆ.

ಸದ್ಯ ಹೃತಿಕ್​ ರೋಷನ್​ ತಮಿಳಿನ ‘ವಿಕ್ರಂ ವೇದ’ ರೀಮೆಕ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್​ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್​ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಫಸ್ಟ್ ಲುಕ್ ಇಂದು ಬಿಡುಗಡೆ ಆಗಿದೆ.

ಹೃತಿಕ್ ಮಾತ್ರವಲ್ಲದೇ, ವಿಕ್ರಮ್ ವೇದಾ ಚಿತ್ರದ ಮೊಟ್ಟ ಮೊದಲ ಪೋಸ್ಟ್ ಇದಾಗಿದೆ. ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಪುಷ್ಕರ್-ಗಾಯತ್ರಿ ಜೋಡಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ರಿಲೀಸ್ ಮಾಡಿ, ಹೃತಿಕ್ ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. 30ನೇ ಸೆಪ್ಟೆಂಬರ್ 2022 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ವಿಕ್ರಮ್ ವೇದಾ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ಸೈಫ್ ಅಲಿ ಖಾನ್, ರಾಧಿಕಾ ಆಪ್ಟೆ ನಟಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!