ಇಂದು ಯಶ್ ಬರ್ತ್ ಡೇ: ರಿಲೀಸ್ ಆಯ್ತು ಹೊಸ ಪೋಸ್ಟರ್

ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಪ್ರಯುಕ್ತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿದೆ.

ಯಶ್ ಹುಟ್ಟು ಹಬ್ಬದ ದಿನದ ಖುಷಿಯನ್ನು ಹೆಚ್ಚಿಸಲು ‘ಹೊಂಬಾಳೆ ಫಿಲಂಸ್ ಕೈ ಜೋಡಿಸಿದೆ. ಅಭಿಮಾನಿಗಳ ಒತ್ತಾಯದಂತೆ ಯಶ್​ ಜನ್ಮದಿನದ ಪ್ರಯುಕ್ತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿದ್ದು, ಇದನ್ನು ನೋಡಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಯಶ್​ ಹುಟ್ಟುಹಬ್ಬದ ದಿನ ‘ಕೆಜಿಎಫ್​: ಚಾಪ್ಟರ್​ 2′ ಟೀಸರ್​ ಬಿಡುಗಡೆಯಾಗಿತ್ತು. ಈ ಬಾರಿ ಟೀಸರ್​ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ರೀತಿಯ ಯಾವುದೇ ಪ್ಲ್ಯಾನ್​ ಇಲ್ಲ. ಮುಂದಿನ ಕೆಲ ದಿನಗಳಲ್ಲಿ ಟ್ರೈಲರ್ ಬಿಡುಗಡೆ ಆಗುತ್ತದೆ ಎಂದು ಕೆಲ ದಿನಗಳ ಹಿಂದೆ ಯಶ್​ ಸ್ಪಷ್ಟಪಡಿಸಿದ್ದರು. ಇಂದು ಹೊಸ ಪೋಸ್ಟರ್​ ಬಿಡುಗಡೆ ಆಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಶೇರ್​ ಮಾಡಿ ಸಂಭ್ರಮಿಸುತ್ತಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಸ್ಪಷ್ಟನೆ ನೀಡಿದೆ. ರಿಲೀಸ್​ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಅದು ಖಚಿತಪಡಿಸಿದೆ.

2022ರ ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಸಬಿಡುಗಡೆ ಆಗಲಿದೆ ಎಂದು ಈ ಹಿಂದೆ ಘೋಷಿಸಲಾಗಿದೆ. ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಪ್ರಕಾಶ್​ ರೈ ನಟಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ.

ಸಂಜಯ್ ದತ್ ಕೆಲದಿನಗಳ ಹಿಂದೆ ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಪೂರ್ಣಗೊಳಿಸಿದ್ದರು. ಚಿತ್ರದ ಕೊನೆಯ ಹಂತದ ಪ್ಯಾಚ್ ಅಪ್ ಶೂಟಿಂಗ್ ಇನ್ನಷ್ಟೇ ನಡೆಯಬೇಕಿದೆ.

ಸ್ಯಾಂಡಲ್‍ವುಡ್ ನಟ ಯಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಂದ ಶುಭಾಶಯದ ಮಹಾಪೂರ ಹರಿದು ಬರುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!