ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಜನವರಿ 7ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಲಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿ ಗಳಿಸಿದೆ. 2021ರಲ್ಲಿ ಭಾರತದಲ್ಲಿ ಅತ್ಯಧಿಕ ಲಾಭ ಗಳಿಸಿದ ಸಿನಿಮಾ ಇದಾಗಿದೆ.
ಸುಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಪುಷ್ಪ ಸಿನಿಮಾವನ್ನು ಅಮೇಜಾನ್ ಪ್ರೈಮ್ ಸಬ್‌ಸ್ಕ್ರೈಬ್ ಮಾಡಿರುವವರು ವೀಕ್ಷಣೆ ಮಾಡಬಹುದು. ಈ ಚಿತ್ರ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ.
” ಆಕ್ಷನ್ ಆಧಾರಿತ ಪುಷ್ಪ: ದಿ ರೈಸ್- ಭಾಗ 1 ನ್ನು ಪ್ರೈಮ್ ವಿಡಿಯೋದಲ್ಲಿ ವಿಶ್ವಾದ್ಯಂತ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಈ ಮೂಲಕ ನಮ್ಮ ವೀಕ್ಷಕರಿಗೆ ಹೊಸ ವರ್ಷಕ್ಕೆ ರೋಮಾಂಚಕ ಆರಂಭವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ,’ ಎಂದು ಪ್ರೈಮ್ ವಿಡಿಯೋ ಭಾರತದ ಕಂಟೆಂಟ್ ಲೈಸೆನ್ಸಿಂಗ್ ಮುಖ್ಯಸ್ಥ ಮನೀಶ್ ಮೆಂಘಾನಿ ಹೇಳಿದ್ದಾರೆ.
ಲಾರಿ ಡ್ರೈವರ್ ಪುಷ್ಪ ರಾಜು ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಚಂದನದ ಮರಗಳನ್ನು ಕಳ್ಳಸಾಗಾಣಿ ಮಾಡುವ ಕಥೆಯನ್ನು ಸಿನಿಮಾ ಹೊಂದಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮಿಡಿಯಾ ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ.
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಡಬ್ ಮಾಡದ ಬಗ್ಗೆ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡ ಅವತರಣಿಕೆಯಲ್ಲಿ ಚಿತ್ರ ಪ್ರದರ್ಶನ ಆಗದ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರದ ಎರಡನೇ ಭಾಗ ಇನ್ನು ತೆರೆಗೆ ಬರಬೇಕಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.
__
Be the first to comment