14 ವರ್ಷದ ಬಳಿಕ ಇರ್ಫಾನ್ ಖಾನ್ ಚಿತ್ರ ರಿಲೀಸ್

ಬಾಲಿವುಡ್ ನಟ ಇರ್ಫಾನ್ ಖಾನ್ ಅವರ 14 ವರ್ಷಗಳ ಹಳೆಯ ಚಿತ್ರವೊಂದು ಈಗ ಬಿಡುಗಡೆ ಆಗುತ್ತಿದೆ.

ಇರ್ಫಾನ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಮರ್ಡರ್ ಅಟ್ ತೀಸ್ರಿ ಮನ್ಜಿಲ್ 302’ ಚಿತ್ರ ಜೀ5 ಓಟಿಟಿಯಲ್ಲಿ ಡಿಸೆಂಬರ್ 31ರಂದು ಬಿಡುಗಡೆ ಆಗಲಿದೆ.

ಜೀ5 ಚಿತ್ರದ ಟ್ರೈಲರ್​ ಕೂಡ ಹಂಚಿಕೊಂಡಿದೆ. ಇರ್ಫಾನ್ ಖಾನ್ ಅಭಿಮಾನಿಗಳು ಟ್ರೈಲರ್ ನೋಡಿ ಥ್ರಿಲ್ ಆಗಿದ್ದಾರೆ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವನ್ನು ನವ್ನೀತ್ ಬಾಜ್ ಸೈನಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಣವೀರ್ ಶೋರೆ, ಲಕ್ಕಿ ಅಲಿ, ದೀಪಲ್ ಶಾ ಮೊದಲಾದವರು ನಟಿಸಿದ್ದಾರೆ. ನಾನಾ ಕಾರಣಗಳಿಂದ ಈ ಚಿತ್ರದ ಬಿಡುಗಡೆ ವಿಳಂಬವಾಗಿತ್ತು.

ಕ್ಯಾನ್ಸರ್​ ನಿಂದ ಇರ್ಫಾನ್ ಖಾನ್ ಅವರು 2020 ರಲ್ಲಿ ನಿಧನ ಹೊಂದಿದರು. ಅವರು ಕೊನೆಯದಾಗಿ ‘ಅಂಗ್ರೇಜಿ ಮೀಡಿಯಮ್’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ನಟನೆಗೆ ಇರ್ಫಾನ್​ ಖಾನ್ ಅವರಿಗೆ ಫಿಲ್ಮ್​ಫೇರ್ ಪ್ರಶಸ್ತಿ ಲಭಿಸಿತ್ತು.

ಜನ ಮಾನಸದಲ್ಲಿ ತಮ್ಮ ನಟನೆಯ ಮೂಲಕ ಗಮನಸೆಳೆದಿದ್ದ ಇರ್ಫಾನ್ ಖಾನ್ ಅವರ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷವನ್ನುಂಟುಮಾಡಿದೆ. ಕಲಾವಿದ ಎಂದಿಗೂ ಜೀವಂತ ಎನ್ನುವುದು ಹೊಸ ಚಿತ್ರ ಹದಿನಾಲ್ಕು ವರ್ಷಗಳ ಬಳಿಕ ಬಿಡುಗಡೆ ಆಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!