’83’ ಚಿತ್ರಕ್ಕೆ ಪೈರಸಿ ಕಾಟ

ರಣವೀರ್ ಸಿಂಗ್ ಹೀರೋ ಆಗಿರುವ ಭಾರತ ತಂಡದ 1983ರ ವಿಶ್ವಕಪ್ ಕ್ರಿಕೆಟ್ ಗೆಲುವಿನ ಕತೆ ಹೊಂದಿರುವ ’83’ ಸಿನಿಮಾ  ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ.

83 ಸಿನಿಮಾ ಹಲವು ವೆಬ್ ಸೈಟ್ ಗಳಲ್ಲಿ ಚಿತ್ರ ಬಿಡುಗಡೆ ಆದ ಕೆಲ ಹೊತ್ತಿನಲ್ಲಿ ಸೋರಿಕೆಯಾಗಿದೆ. ಟೆಲಿಗ್ರಾಂನಂತಹ ಪ್ರಮುಖ ಆಪ್ ಗಳಲ್ಲೇ ಚಿತ್ರ ಸೋರಿಕೆಯಾಗಿದ್ದು, ಇದು ಚಿತ್ರದ ಗಳಿಕೆ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.

ದೇಶದಾದ್ಯಂತ ಸುಮಾರು 3,500 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ ’83’ ಚಿತ್ರ ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು ಹೊಂದಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬಂದಿದೆ.

ಕಪಿಲ್ ದೇವ್ ಅವರ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಕಪಿಲ್‌ ದೇವ್‌ ಅವರ ಪತ್ನಿ ರೋಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡಿದ್ದಾರೆ.

’83’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಸಿನಿಮಾ ಬಿಡುಗಡೆ ವಿಳಂಬ ಆಯಿತು. ’83’ ಚಿತ್ರ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಆಗಿದೆ. ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮದುವೆ ಆದ ಬಳಿಕ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಇದಾಗಿದೆ.

ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ್ದ ದೀಪಿಕಾ ಪಡುಕೋಣೆ ಅವರು ಈಗ 15 ವರ್ಷಗಳ ಬಳಿಕ ಕನ್ನಡದ ಡಬ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!