ತೆರೆ ಮೇಲೆ ಬರಲಿದೆ ಮತ್ತೊಂದು ಶ್ವಾನದ ಚಿತ್ರ!

‘ನಾಯಿ ಇದೆ ಎಚ್ಚರಿಕೆ’ ಎನ್ನುವ ಭಿನ್ನ ಹೆಸರಿನ ಕನ್ನಡ ಚಿತ್ರದ ಮುಹೂರ್ತ ನೆರವೇರಿದೆ.

ಜರ್ಮನ್ ಶಫರ್ಡ್ ಬ್ರೀಡ್‍ನ ಕಪ್ಪು‌ಚಿರತೆಯ ರೀತಿ ಇರುವ ಕೆಂಪು ಕಣ್ಣಿನ ‘ರೂಬಿ’ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ವೈರಸ್ ಆಧಾರಿತ ಕಥಾಹಂದರವಿರುವ ಸಿನಿಮಾ‌ ಇದಾಗಿದ್ದು ಮುಹೂರ್ತ ಬೆಂಗಳೂರಿನಲ್ಲಿ ಕಳೆದ ಡಿಸೆಂಬರ್ 9ರಂದು ನೆರವೇರಿದೆ.

” ಕಾಮತ್ ಎನ್ನುವ ನಿರ್ದೇಶಕನ ಪಾತ್ರದಲ್ಲಿ ನಿಮ್ಮೆಲ್ಲರನ್ನೂ ನಗಿಸುವ ಪ್ರಯತ್ನ ಮಾಡಲಾಗುವುದು. ಸ್ಯಾಂಡಲ್‍ವುಡ್‍ ನಲ್ಲಿ ಈ ರೀತಿಯ ಕಥೆ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ’ ಎಂದು ನಿರ್ಮಾಪಕ ಪ್ರಬಿಕ್ ಮೊಗವೀರ್ ಹೇಳಿದ್ದಾರೆ.

“ಈ ಸಿನಿಮಾದಲ್ಲಿ ನಾಯಿಯ ಪಾತ್ರ ತುಂಬಾ ಭಿನ್ನವಾಗಿದೆ. ಇದೊಂದು ಕಾಮಿಡಿ ಎಂಟರ್‍ಟೈನ್‍ಮೆಂಟ್ ಸಿನಿಮಾ. ಇದರಲ್ಲಿ ನಾಯಿ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದೂ ಅಲ್ಲದೇ ಒಂದು ಒಳ್ಳೆಯ ಸಾಮಾಜಿಕ ಸಂದೇಶವನ್ನೂ ಸಾರಲಿದೆ’ ಎಂದು ಪ್ರಬಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಕಪ್ಪು ಬಣ್ಣದ ನಾಯಿ ರೂಬಿ ಕೆಂಪು ಕಣ್ಣುಗಳನ್ನು ಬಿಟ್ಟುಕೊಂಡು ದುರುಗುಟ್ಟಿ ನೋಡುತ್ತಿರುವ ಈ ಸಿನಿಮಾದ ಪೋಸ್ಟರ್ ಈಗಾಗಲೇ ವೈರಲ್ ಆಗಿದ್ದು ಕುತೂಹಲ ಮೂಡಿಸಿದೆ.

‘ತನಿಖೆ’ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಜಿ.ಎಸ್.ಕಲಿಗೌಡ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಚಿತ್ರತಂಡ ಕಲಾವಿದರ ಹೆಸರನ್ನು ಇನ್ನಷ್ಟೇ ಬಹಿರಂಗ ಮಾಡಬೇಕಿದೆ.

ಕ್ರಿಸ್ಟೋಫರ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬರಲಿವೆ. ಶ್ಯಾಮ್ ಸಿಂಧನೂರು ಕ್ಯಾಮರಾ, ಧನು ಕೃಷ್ಣ ಸಂಕಲನ ಕೆಲಸ ಮಾಡಲಿದ್ದಾರೆ. ಪ್ರಬಿಕ್ ಮೊಗವೀರ್ , ಲಾವಣ್ಯ ಘಡೆ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!