ರಕ್ತ ಚಂದನ ಲೋಕದ ‘ ಪುಷ್ಪ ‘ ಟ್ರೈಲರ್ ಔಟ್

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಕುತೂಹಲ ಮೂಡಿಸಿದೆ.

ಟ್ರೈಲರ್ ನಲ್ಲಿ ಹಲವರ ಪಾತ್ರ ಪರಿಚಯ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಲ್ಲದೆ ಇನ್ನೂ ಕೆಲವು ಪಾತ್ರಗಳ ಪರಿಚಯ ಟ್ರೈಲರ್‌ನಲ್ಲಿ ಇದೆ. ಕನ್ನಡದ ನಟ ಡಾಲಿ ಧನಂಜಯ್ ಟ್ರೈಲರ್ ನಲ್ಲಿ ಇದ್ದಾರೆ. ಫಹಾದ್ ಫಾಸಿಲ್ ಲುಕ್, ಅಭಿನಯ ನೋಡುಗರಿಗೆ ಭಯ ಹುಟ್ಟಿಸುತ್ತದೆ.

ಟ್ರೈಲರ್ ನಲ್ಲಿ ರಕ್ತ ಚಂದನಕ್ಕಾಗಿ ಗ್ಯಾಂಗ್‌ಗಳ ನಡುವೆ ಜಗಳ, ಪೊಲೀಸರು ಹಾಗೂ ಕಳ್ಳ ಸಾಗಣೆದಾರರ ನಡುವಣ ಬಡಿದಾಟ ಕಂಡು ಬಂದಿದೆ. ಭರ್ಜರಿ ಫೈಟ್‌ ಹಾಗೂ ಚೇಸ್‌ಗಳು ಇಲ್ಲಿವೆ. ರಶ್ಮಿಕಾ ಮಂದಣ್ಣ ಜೊತೆಗೆ ಲವ್‌ ಸ್ಟೋರಿ ಇದ್ದು ರಶ್ಮಿಕಾ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪುಷ್ಪ’ ಸಿನಿಮಾದ ಮೊದಲ ಭಾಗ ಡಿಸೆಂಬರ್ 17ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಕೆಲ ತಿಂಗಳ ಬಳಿಕ ಬಿಡುಗಡೆ ಆಗಲಿದೆ. ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ.

ಚಿತ್ರತಂಡ ಸಿನಿಮಾ ಚಿತ್ರೀಕರಣ ಆರಂಭಿಸುವ ಮುನ್ನ ಇದು ರಕ್ತ ಚಂದನ ಕುರಿತಾದ ಕತೆ ಹೊಂದಿದೆ ಎಂದು ಘೋಷಿಸಿತ್ತು. ಈಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿಯೂ ಈ ವಿಷಯಕ್ಕೆ ಹೆಚ್ಚು ಪ್ರಾಶಸ್ಯ ನೀಡಲಾಗಿದೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಮಿರಸ್ಲೋವ್ ಕೂಬ ಬ್ರೋಜೆಕ್ ಸಿನಿಮಾಟೋಗ್ರಫಿ ಮಾಡಿದ್ದಾರೆ. ಚಿತ್ರ ಯಾವ ರೀತಿ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ ಎನ್ನುವುದನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!