ಡಿ.31ಕ್ಕೆ ‘ಅರ್ಜನ್​ ಗೌಡ’

ಕೋಟಿ ರಾಮು ನಿರ್ಮಾಣದ ‘ಅರ್ಜನ್​ ಗೌಡ’ ಚಿತ್ರವನ್ನು ಡಿ.31ರಂದು ತೆರೆಗೆ ತರಲು ಮಾಲಾಶ್ರೀ ಮುಂದಾಗಿದ್ದಾರೆ.

ಪ್ರಜ್ವಲ್​ ದೇವರಾಜ್​ ನಟನೆಯ ಆಕ್ಶನ್ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕೊರೊನಾದಿಂದ ಈ ವರ್ಷ ನಿಧನರಾದ ರಾಮು ನಿರ್ಮಾಣದ ಕೊನೆಯ ಚಿತ್ರವನ್ನು ಮಾಲಾಶ್ರೀ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.
ಈ ಚಿತ್ರಕ್ಕೆ ಲಕ್ಕಿ ಶಂಕರ್​ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್​ ಕಿಟ್ಟು ಸಂಕಲನ, ಜೈ ಆನಂದ್​ ಛಾಯಾಗ್ರಹಣ ಇದೆ.

ಮಾಸ್​ ಮಾದ ಅವರ ಸಾಹಸ ನಿರ್ದೇಶನ ಇರುವ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್​ ಅಭಿನಯಿಸಿದ್ದಾರೆ.
ಸ್ಪರ್ಶ’ ರೇಖಾ, ದಿನೇಶ್ ಮಂಗಳೂರು, ಸಾಧು ಕೋಕಿಲ, ರಾಜ್​ ದೀಪಕ್​ ಶೆಟ್ಟಿ, ರಾಹುಲ್​ ದೇವ್​, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಮಾಲಾಶ್ರೀ ಅವರು ಈಗಾಗಲೇ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಅರ್ಜುನ್ ಗೌಡ’ ಚಿತ್ರದ ಪೋಸ್ಟರ್​ಗಳನ್ನು ಹಂಚಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಡಿಸೆಂಬರ್​ನಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಅವುಗಳ ಸಾಲಿಗೆ ‘ಅರ್ಜುನ್ ಗೌಡ’ ಸಹ ಈಗ ಸೇರಿದೆ.

ಈಗಾಗಲೇ ಟ್ರೈಲರ್​ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ‘ಅರ್ಜನ್​ ಗೌಡ’ ಚಿತ್ರ ಮಂದಿರಗಳಲ್ಲಿ ಯಾವ ರೀತಿ ಮ್ಯಾಜಿಕ್ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!