ಲಿರಿಕ್ಸ್ ಮೂಲಕ ಗಮನ ಸೆಳೆದ ಡಾಲಿ

ನಟ ಡಾಲಿ ಧನಂಜಯ್ , ಬಡವ ರಾಸ್ಕಲ್ ಚಿತ್ರಕ್ಕೆ ಲಿರಿಕ್ಸ್ ಬರೆಯುವ ಮೂಲಕವೂ ಗಮನ ಸೆಳೆದಿದ್ದು, ಅವರು ಬರೆದಿರುವ “ಆಗಾಗ ನೆನಪಾಗುತ್ತಾಳೆ” ಹಾಡು ಒಳ್ಳೆಯ ಪ್ರಶಂಸೆ ಪಡೆಯುತ್ತಿದೆ.

ವಾಸುಕಿ ವೈಭವ್ ಅವರ ಧ್ವನಿಯಲ್ಲಿ ಬ್ರೇಕಪ್ ಫೀಲ್ ಕೊಡೋ “ಆಗಾಗ ನೆನಪಾಗುತ್ತಾಳೆ” ಹಾಡು ಬಿಡುಗಡೆಯಾದ ಕೆಲ ದಿನಗಳಲ್ಲೇ 8 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿದೆ. ವಾಸುಕಿ ವೈಭವ್ ಗೀತ ರಚನೆಗೆ ಜೀವ ತುಂಬಿ ಹಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಪರಾಧ ಲೋಕದ ಈ ಸಿನಿಮಾದಲ್ಲಿ ಅಮೃತ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದು , ಡಾಲಿ ಪಿಚ್ಚರ್ ಚಿತ್ರ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಪ್ರೀತ ಜಯರಾಮ್ ಛಾಯಗ್ರಹಣ, ವಾಸುಕಿ ವೈಭವ್ ಸಂಗೀತ ಇದೆ. ನಾಗಭೂಷಣ್, ರಂಗಾಯಣ ರಘು, ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬಡವ ರಾಸ್ಕಲ್ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಿದ್ದು, ಡಿಸೆಂಬರ್ 24ಕ್ಕೆ ಕ್ರಿಸ್ಮಸ್ ಪ್ರಯುಕ್ತ ಚಿತ್ರ ತೆರೆ ಕಾಣಲಿದೆ. ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ ಕೂಡ ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಪುಷ್ಪ ಚಿತ್ರದಲ್ಲಿ ಧನಂಜಯ್‌ ಅವರದ್ದು ಪ್ರಮುಖ ಪಾತ್ರ ಇದ್ದು, ಈಗಾಗಲೇ ಧನಂಜಯ್‌ ಲುಕ್‌ ರಿಲೀಸ್‌ ಆಗಿದೆ.

ಧನಂಜಯ್ ಅಭಿನಯದ ರತ್ನನ್ ಪ್ರಪಂಚ, ಸಲಗ ಚಿತ್ರಗಳು ಈಗಾಗಲೆ ಬಿಡುಗಡೆಯಾಗಿದ್ದು ಧನಂಜಯ್ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಧನಂಜಯ್ ಹೆಡ್ ಬುಷ್ ಚಿತ್ರ ನಿರ್ಮಿಸುವ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಧನಂಜಯ್ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

ಈಗಾಗಲೇ ಬಡವ ರಾಸ್ಕಲ್ ಸಿನಿಮಾದ ಪಾತ್ರ ಪರಿಚಯ ಇರುವ ವಿಶೇಷ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಮೆಚ್ಚುಗೆಗೆ ಪಾತ್ರವಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!