ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದ ನಂತರ ನಟಿ ಸಮಂತಾ ಅವರು ಐಟಂ ಹಾಡಿನ ಮೂಲಕ ಚಿತ್ರೀಕರಣಕ್ಕೆ ಮರಳಿದ್ದಾರೆ.
ದೀರ್ಘ ಸಮಯದ ನಂತರ, ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಐಟಂ ಸಾಂಗ್ ನಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಹೈರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಲಾಗಿದ್ದು, ಶೂಟಿಂಗ್ ಆರಂಭ ಆಗಿದೆ.
ಸುಕುಮಾರ್ ನಿರ್ದೇಶನದ ಕಮರ್ಷಿಯಲ್ ಸಿನಿಮಾ ಪುಷ್ಪಾ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಾಗ ಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಸಮಂತಾ ಕೆಲವು ತಿಂಗಳುಗಳ ಕಾಲ ಚಿತ್ರ ನಟನೆಯಿಂದ ವಿರಾಮ ತೆಗೆದುಕೊಂಡರು. ಈಗ ಅವರು ಕೆಲಸವನ್ನು ಪುನರಾರಂಭಿಸಿದ್ದು ,ಪುಷ್ಪ ಸಿನಿಮಾದಲ್ಲಿರುವ ಐಟಂ ಹಾಡಿನ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಐದು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ. ಐಟಂ ಸಾಂಗ್ ನ್ನು ದೇವಿಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ.
ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಅವರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದರಿಂದ ಈ ದಂಪತಿ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದರು.
___

Be the first to comment