ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ” ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗುವುದು ಡೌಟ್ ಆಗಿದೆ.
ಈ ವರ್ಷದ ಡಿಸೆಂಬರ್ 31ರಂದು ಚಾರ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರದಿಂದ ಈ ಹಿಂದೆ ಘೋಷಣೆ ಮಾಡಿತ್ತು. ಆದರೆ ಈ ಸಮಯದಲ್ಲಿ ಬೇರೆ ಭಾಷೆಯ ಚಿತ್ರಗಳು ತೆರೆಗೆ ಬರುತ್ತಿರುವ ಕಾರಣ ಚಿತ್ರತಂಡ ರಿಲೀಸ್ ದಿನಾಂಕವನ್ನು ಮುಂದೂಡಲು ಚಿಂತನೆ ಮಾಡಿದೆ.
ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗಿನಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ ಚಿತ್ರತಂಡ ಕೇವಲ ಕನ್ನಡ ಚಿತ್ರಗಳ ಜೊತೆಗೆ ಮಾತ್ರ ರಿಲೀಸ್ ದಿನಾಂಕವನ್ನು ಹೊಂದಾಣಿಕೆ ಮಾಡಿಕೊಳ್ಳುವ ಜೊತೆಗೆ ಪ್ಯಾನ್ ಇಂಡಿಯಾ ಯಾವೆಲ್ಲಾ ಚಿತ್ರಗಳು ತೆರೆಗೆ ಬರುತ್ತಿವೆ ಎನ್ನುವುದನ್ನು ಲೆಕ್ಕ ಹಾಕುತ್ತಿದೆ. ಈಗಾಗಲೇ ಚಾರ್ಲಿ ವಿತರಣೆ ಹಕ್ಕು ಬಾಲಿವುಡ್ ಮತ್ತು ತೆಲುಗಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳ ಕೈ ಸೇರಿದೆ. ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡುವ ಮಾತುಕಥೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಚಿತ್ರ ತಂಡ ತಿಳಿಸಿದೆ.
ಡಿಸೆಂಬರ್ನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಿಡುಗಡೆ ಆಗುತ್ತಿದೆ. ಎರಡು ವಾರದ ಬಳಿಕ ಚಾರ್ಲಿ ರಿಲೀಸ್ ಆದರೂ ಜನವರಿ 7ಕ್ಕೆ ಆರ್ ಆರ್ ಆರ್ ಚಿತ್ರ ರಿಲೀಸ್ ಆಗುತ್ತಿದೆ. ಹೀಗಾಗಿ ಚಾರ್ಲಿಗೆ ಕೇವಲ ಒಂದು ವಾರದ ಅವಕಾಶ ಸಿಗುತ್ತಿದ್ದು ಇದು ಸಿನಿಮಾದ ಹಿಂದಿ, ತೆಲುಗು, ತಮಿಳು ಅವತರಣಿಕೆಗೆ ನಷ್ಟ ಉಂಟು ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಲಾಗಿದೆ.
777 ಚಾರ್ಲಿ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನವಿದೆ. ಪರಂವಃ ಸ್ಟೂಡಿಯೋ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ನಟ ರಕ್ಷಿತ್ ಶೆಟ್ಟಿ ಅವರಿಗೆ ಸಂಗೀತಾ ಶೃಂಗೇರಿ ನಾಯಕಿ ಆಗಿ ಅಭಿನಯಿಸಿದ್ದಾರೆ.
ಈಗಾಗಲೇ ಸಿನಿಮಾದ ಹಾಡು, ಟ್ರೈಲರ್ ಬಿಡುಗಡೆಯಾಗಿದ್ದು ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ.
___
Be the first to comment