ಐಟಿ ಉದ್ಯೋಗಿಗಳ ಸೈಕಲಾಜಿಕಲ್ ಥ್ರಿಲ್ಲರ್ ‘ಕಾನ್ಸೀಲಿಯಂ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಇದು ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಆಗಿದೆ. ಐಟಿ ಉದ್ಯೋಗಿಗಳು ನಿರ್ಮಿಸಿರುವ ಈ ಸಿನಿಮಾದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳ ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳಲು ಯುವ ನಿರ್ದೇಶಕ ಸಮರ್ಥ್ ಮುಂದಾಗಿದ್ದಾರೆ. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.
ಕಾನ್ಸೀಲಿಯಂ ಎನ್ನುವುದು ಲ್ಯಾಟಿನ್ ಪದ. ಇದಕ್ಕೆ ಪ್ಲಾನಿಂಗ್, ಜಡ್ಜಮೆಂಟ್, ಅಡ್ವೈಸ್ ಇತ್ಯಾದಿ ಅರ್ಥಗಳಿವೆ. ಈ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿರುವ ಕಾರಣ ಕಾನ್ಸೀಲಿಯಂ ಎನ್ನುವ ಟೈಟಲ್ ಚಿತ್ರಕ್ಕೆ ಫಿಕ್ಸ್ ಮಾಡಲಾಗಿದೆ.
ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಇರುವ ಮಂಡ್ಯದ ಪ್ರತಿಭೆ ಸಮರ್ಥ್ಯ ಈ ಚಿತ್ರದ ನಿರ್ದೇಶನ ಮಾಡುವ ಜೊತೆಗೆ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಸೀತಾರಾಮ್ ಶಾಸ್ತ್ರೀ ಪ್ರೊಡಕ್ಷನ್ ನಡಿ ತಯಾರಾಗಿರುವ ಕಾನ್ಸೀಲಿಯಂ ಸಿನಿಮಾದಲ್ಲಿ ಪ್ರೀತಂ, ಮನೆದೇವ್ರು ಸೀರಿಯಲ್ ಖ್ಯಾತಿಯ ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ, ಲವ್ ಮಾಕ್ಟೇಲ್ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಂಕರ್ ನಾಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರೋ ಕಾನ್ಸೀಲಿಯಂ ಸಿನಿಮಾ ಬಳಗದಲ್ಲಿ ರೇಷ್ಮಾ ರಾವ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಫಸ್ಟ್ ಲುಕ್, ಟೀಸರ್ ಮೂಲಕ ಸೌಂಡ್ ಮಾಡುತ್ತಿರುವ ಕಾನ್ಸೀಲಿಯಂ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
__
Be the first to comment