ಗಮನ ಸೆಳೆಯುತ್ತಿರುವ “ಸ್ನೇಹಿತ” ವಿಡಿಯೋ ಸಾಂಗ್

ಸ್ನೇಹಿತ ಸಿನಿಮಾದ ವಿಡಿಯೋ ಸಾಂಗ್ ಯೂಟ್ಯೂಬ್‌ ನಲ್ಲಿ ಬಿಡುಗಡೆ ಆಗಿದ್ದು ಸಿನಿಪ್ರಿಯರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಆಕಾಶ್ ಆಡಿಯೋ ಕಂಪನಿ ಸ್ನೇಹಿತ ಸಿನಿಮಾದ “ಪ್ರೀತಿ ಒಂಥರ” ಹಾಡು ಬಿಡುಗಡೆ ಮಾಡಿದೆ. ಈ ಹಾಡನ್ನು ಸಾವಿರಾರು ಜನರು ವೀಕ್ಷಣೆ ಮಾಡಿ ಮೆಚ್ಚುಗೆಯ ಮಾತನಾಡಿದ್ದಾರೆ.

ಅದೇ ರೀತಿ “ಮಿಂಚಾದೆ ನೀನು” ರಿಲಿಕಲ್‌ ಸಾಂಗ್‌ ಬಿಡುಗಡೆ ಆಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ನಾಯಕ ನಟ ಧನುಷ್‌ ಸಂತಸ ವ್ಯಕ್ತಪಡಿಸಿದ್ದಾರೆ.

“ಚಿತ್ರಪ್ರೇಮಿಗಳು ಸ್ನೇಹಿತ ಚಿತ್ರದ ಲಿರಿಕಲ್ ವಿಡಿಯೋ ನೋಡಿ ಹರಸಿದ್ದೀರಿ. ಬಹಳ ಜನ ಮರ್ಶೆಗಳನ್ನು ಮಾಡಿ ಹೊಗಳಿದ್ದೀರಿ. ಇಂಥ ಸಾಹಿತ್ಯ ಕೇಳಿ ಎಷ್ಟೋ ವರ್ಷಗಳಾದವು. ವಿಶೇಷವಾಗಿ ನಿಮ್ಮ ಲಿರಿಕಲ್ ವಿಡಿಯೋ ಕುಟುಂಬ ಪರಿವಾರ ನೋಡುವ ಸಾಹಿತ್ಯ ಚಿತ್ರವಾಗಿದೆ ಎಂದು ಹರಸಿದ್ದೀರಿ ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಚಿತ್ರತಂಡದ ಎಲ್ಲರೂ ನಿಮಗೆ ಧನ್ಯರಾಗಿದ್ದೇವೆ” ಎಂದು ಧನುಷ್‌ ತಿಳಿಸಿದ್ದಾರೆ.

ಸಂಗೀತ್‌ ಸಾಗರ್‌ ನಿರ್ದೇಶನದ ಸ್ನೇಹಿತ ಚಿತ್ರದಲ್ಲಿ ಧನುಷ್‌ ನಾಯಕ ಆಗಿ ನಟನೆ ಮಾಡಿದ್ದಾರೆ. ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತವನ್ನು ಸಂಗೀತ್‌ ಸಾಗರ್‌  ಅವರೇ ನೀಡಿದ್ದಾರೆ.

ಚಿತ್ರದಲ್ಲಿ ಸುಲಕ್ಷಾ ಅವರು ನಾಯಕಿ ಆಗಿ ನಟಿಸಿದ್ದಾರೆ. ಹಿರಿಯ ನಟ ಉಮೇಶ್‌ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ನೇಹತ ಮಹತ್ವವನ್ನು ಸಾರುವ ಈ ಚಿತ್ರವನ್ನು ಆರ್‌ ಅಶೋಕ್‌ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ನವೆಂಬರ್‌ 19 ರಂದು ಬಿಡುಗಡೆ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!