ನ.15ರಂದು ಬರಲಿದೆ “ಯಾರಿಗೆ ಬೇಕು ಈ ಲೋಕ” ಫಸ್ಟ್ ಲುಕ್

ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ “ಯಾರಿಗೆ ಬೇಕು ಈ ಲೋಕ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನವೆಂಬರ್ 15 ರಂದು ಬಿಡುಗಡೆಯಾಗಲಿದೆ.‌‌

ಇತ್ತೀಚೆಗೆ ನಮ್ಮ‌ನ್ನು ಬಿಟ್ಟು ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಈ‌ ಪೋಸ್ಟರ್ ಸಮರ್ಪಿಸುವುದಾಗಿ ಚಿತ್ರತಂಡ ತಿಳಿಸಿದೆ.  ಈ ಚಿತ್ರದಲ್ಲಿನಟಿಸುತ್ತಿದ್ದಾರೆ.

ಹಿರಿಯ ನಟ ವಿನೋದ್ ಕುಮಾರ್, ರಚ ರವಿ, ರಾಮು(ಜ್ಯೂನಿಯರ್ ರಾಜಕುಮಾರ್), ಶೋಭನ್ ಅಕ್ಷರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಿಸುತ್ತಿದ್ದಾರೆ.

ಮಹಿತ್ ನಾರಾಯಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ರೀ ವಸಂತ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ “ಯಾರಿಗೆ ಬೇಕು ಈ ಲೋಕ” ಚಿತ್ರಕ್ಕಿದೆ.


 

Be the first to comment

Leave a Reply

Your email address will not be published. Required fields are marked *

Translate »
error: Content is protected !!