ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದ ನಾಯಕನಾಗಿ ಯಶಸ್ ಸೂರ್ಯ ಆಯ್ಕೆಯಾಗಿದ್ದಾರೆ.
ಸಚಿವ ಬಿ ಸಿ ಪಾಟೀಲ್ ನಿರ್ಮಾಣದ ಈ ಸಿನಿಮಾದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗ ಆಗುವ ಸಾಧ್ಯತೆ ಇದೆ. ನವೆಂಬರ್ 14 ರಂದು ನಿರ್ಮಾಪಕರು ಅಧಿಕೃತವಾಗಿ ಚಲನಚಿತ್ರವನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ಚಿತ್ರದಲ್ಲಿ ಸೂರಿ, ಹರಿಕೃಷ್ಣ, ವಿಕಾಸ್ ಮತ್ತು ಸುಧೀರ್ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಶಿಶಿರ ಮತ್ತು ರಾಮಧಾನ್ಯ ಸಿನಿಮಾದಲ್ಲಿ ನಟಿಸಿರುವ ಯಶಸ್ ಸೂರ್ಯ ಅವರು ಈ ಹಿಂದೆ ದರ್ಶನ್ ನಟನೆಯ ಚಿಂಗಾರಿ, ಕುರುಕ್ಷೇತ್ರ ಹಾಗೂ ಒಡೆಯ ಸಿನಿಮಾಗಳಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಾಜಕಾರಣಿ, ಮಾಜಿ ಪೊಲೀಸ್ ಅಧಿಕಾರಿ ಆಗಿರುವ ಸಚಿವ ಬಿಸಿ ಪಾಟೀಲ್ ನಿರ್ಮಾಣದ ಸಿನಿಮಾದ ಟೈಟಲ್ ನ್ನು ಮುಂದಿನ ಕೆಲ ದಿನಗಳಲ್ಲಿ ಬಹಿರಂಗ ಮಾಡುವ ನಿರೀಕ್ಷೆ ಹೊಂದಲಾಗಿದೆ. ಸದ್ಯ ನಿರ್ದೇಶಕ ಯೋಗರಾಜ್ ಭಟ ಅವರು ಗಾಳಿಪಟ-2 ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
ಸಚಿವ ಬಿvಸಿ ಪಾಟೀಲ್ ನಿರ್ಮಾಣದ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಯೋಗರಾಜ್ ಭಟ್ ಅವರು ಕಳೆದ ಜುಲೈ ತಿಂಗಳಲ್ಲಿ ಘೋಷಣೆ ಮಾಡಿದ್ದರು.
___

Be the first to comment