1 ಲಕ್ಷ ವೀಕ್ಷಣೆ ಪಡೆದ ಕಪೋ ಕಲ್ಪಿತಂ ಚಿತ್ರ

ಯುವ ಪ್ರತಿಭೆಗಳನ್ನು ಒಳಗೊಂಡ ಕಪೋ ಕಲ್ಪಿತಂ ಚಿತ್ರದ ಟ್ರೈಲರ್ 1.1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದೆ. ಸವ್ಯಸಾಚಿ ಕ್ರಿಯೇಶನ್ ನಲ್ಲಿ ತಯಾರಾಗಿರುವ ಈ ಚಿತ್ರ ಕೇವಲ ಐದು ದಿನಗಳಲ್ಲಿ ಚಿತ್ರೀಕರಣ ಹೊಂದಿದ ದಾಖಲೆ ಹೊಂದಿದೆ. ಗಿಂಬಲ್ ಬಳಸಿ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ರಿಲೀಸ್ ಮಾಡಿರುವ ಟ್ರೈಲರ್ ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಚಿತ್ರತಂಡದ ಹುಮ್ಮಸ್ಸು ಹೆಚ್ಚಿಸಿದೆ.

ಸುಮಿತ್ರಾ ರಮೇಶ್ ಗೌಡ ನಿರ್ದೇಶನದ ಈ ಚಿತ್ರ ಆತ್ಮದ ಕಥೆಯನ್ನು ಹೊಂದಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರವನ್ನು ರಮೇಶ್ ಚಿಕ್ಕೆಗೌಡ, ಗಣಿ ದೇವ್ ಕಾರ್ಕಳ ಹಾಗೂ ಕನ್ನಿಕಾ ಕವಿತಾ ಪೂಜಾರಿ ಅವರು ನಿರ್ಮಾಣ ಮಾಡಿದ್ದಾರೆ. ಗಣಿ ದೇವ್ ಕಾರ್ಕಳ ಅವರು ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಚಿತ್ರಕ್ಕೆ ಸಂಗೀತವನ್ನೂ ನೀಡಿದ್ದಾರೆ.

ಚಿತ್ರಕ್ಕೆ ಬಾತು ಕುಲಾಲ್ ಅವರು ಎಡಿಟಿಂಗ್ ಜೊತೆಗೆ ಶೂಟಿಂಗ್ ಮಾಡಿದ್ದಾರೆ. ಪ್ರದೀಪ್ ಮೇಕಪ್, ಹರ್ಷ ಶೆಟ್ಟಿ ಹಾಡಿಗೆ ಧ್ವನಿಯಾಗಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು ನೋಡುಗರಲ್ಲಿ ಕುತೂಹಲವನ್ನು ಉಂಟು ಮಾಡಿದೆ.

ಚಿತ್ರದಲ್ಲಿ ಸುಮಿತ್ರಗೌಡ, ಪ್ರೀತಮ್ ಹೊರನಾಡು, ರಾಜೇಶ್ ಕಣ್ಣೂರು, ದೀಕ್ಷಿತ್ ಗೌಡ, ವಿಶಾಲ್, ಚೈತ್ರ, ಭಾಸ್ಕರ್ ಮಣಿಪಾಲ್, ಸರೋಜಾ ರಾವ್ ಇತರರು ನಟಿಸಿದ್ದಾರೆ.
ಈ ಚಿತ್ರ ಒಂದೇ ಲೊಕೇಶನ್ ನಲ್ಲಿ ಶೇಕಡಾ 90 ರಷ್ಟು ಭಾಗ ಚಿತ್ರೀಕರಣಗೊಂಡ ಸಾಧನೆಯನ್ನು ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!