ಲವ್ಲೀ ಸ್ಟಾರ್ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರ ನವೆಂಬರ್ 12ರಂದು ಕರ್ನಾಟಕ ಅಲ್ಲದೇ, ಹೊರ ರಾಜ್ಯ, ವಿದೇಶಗಳಲ್ಲೂ ಬಿಡುಗಡೆ ಆಗುತ್ತಿದೆ. ಸಾಂಗ್, ಟ್ರೈಲರ್ ಮೂಲಕ ಗಮನ ಸೆಳೆದಿರುವ ಪ್ರೇಮಂ ಪೂಜ್ಯಂ’ ಚಿತ್ರ ಚಿತ್ರ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ್ದು ಚಿತ್ರದ ಬಿಡುಗಡೆಗೆ ಕಾಯುವಂತೆ ಮಾಡಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಕುರಿತು ಚಿತ್ರತಂಡ ತನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದೆ.
ನಾಯಕ ನಟ ಪ್ರೇಮ್, ನಟಿ ಬೃಂದಾ ಆಚಾರ್ಯ, ಪೋಷಕ ನಟ ಮಾಸ್ಟರ್ ಆನಂದ್, ಚಿತ್ರದ ನಿರ್ದೇಶಕ ಡಾ. ರಾಘವೇಂದ್ರ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ಬಿ ಸಿನಿಮಾಸ್ ಜೊತೆ ಹಚ್ಚಿಕೊಂಡಿದ್ದು ಸಂದರ್ಶನದ ಭಾಗ ಇಲ್ಲಿದೆ.
* ತುಂಬಾ ಸಮಯದ ನಂತರ ಸಿನಿಮಾ ಮಾಡುತ್ತಿದ್ದೀರಿ. ಚಿತ್ರದ ಕಥೆ ಕೇಳಿದಾಗ ಹೇಗೆ ಅನಿಸಿತು?
ಪ್ರೇಮ್: ಕಳೆದ ಎರಡು ವರ್ಷಗಳಲ್ಲಿ ನಾನು ಯಾವುದೇ ಸಿನೆಮಾ ಮಾಡಿಲ್ಲ. 84 ಸ್ಕ್ರಿಪ್ಟ್ ಕೇಳಿದ್ದೆ. ಆದರೆ ಸಿನಿಮಾ ಮಾಡಬೇಕು ಅನಿಸಿರಲಿಲ್ಲ. ಮನಸ್ಸಿಗೆ ಇಷ್ಟವಾದ ಸಿನಿಮಾ ಮಾಡಬೇಕು. ಇಲ್ಲವಾದಲ್ಲಿ ಬೇಡ ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಆ ಸಮಯದಲ್ಲಿ ಪ್ರೇಮಂ ಪೂಜ್ಯಂ’ ಕಥೆ ಕೇಳಿದೆ. ಆ ಕಥೆ ಕೇಳಿ ಟ್ರಾನ್ಸ್ ಗೆ ಹೊರಟು ಹೋದೆ. ಸಿನಿಮಾದ ಕತೆ ಕೇಳಿದಾಗ ಸಿನಿಮಾ ಕಣ್ಣಮುಂದೆ ಹಾದು ಹೋದಂತೆ ಆಯಿತು. ಕಥೆ ಕೇಳಿದ ನಂತರ ನಾನು ಎದ್ದು ಕ್ಲ್ಯಾಪ್ ಮಾಡಿದೆ. ಸಾಮಾನ್ಯವಾಗಿ ನಾನು ಆ ರೀತಿ ಮಾಡುವುದಿಲ್ಲ. ಕಥೆ ಕೇಳಿ ಎರಡು ದಿವಸ ಕಳೆದು ನಿಧಾನಕ್ಕೆ ಡಿಸಿಷನ್ ಹೇಳುತ್ತೇನೆ. ಆದರೆ ಫಸ್ಟ್ ಟೈಮ್ ಈ ರೀತಿಯ ಅನುಭವ ಆಯಿತು.
* ರೋಮಾನ್ಸ್ ಗೆ ಅಂಬಾಸಿಡರ್ ಅನ್ನುವ ರೀತಿ ಕಾಣಿಸುತ್ತಿದ್ದೀರಾ. ಏನು ಅನ್ನುತ್ತೀರಿ?
ಪ್ರೇಮ್: ಈ ರೀತಿ ಚಂದ ಹಾಗೆ ಕಾಣಿಸುವಲ್ಲಿ ನಿರ್ದೇಶಕರು, ಸಿನಿಮಾಟೋಗ್ರಾಫರ್ ನವೀನ್ ಕುಮಾರ್ ಸೇರಿದಂತೆ ಇಡೀ ತಂಡದ ಶ್ರಮವಿದೆ. ಎಲ್ಲರೂ ಶ್ರಮಪಟ್ಟು ಮಾಡಿರುವ ಕಾರಣ ಚಂದವಾಗಿ ಮೂಡಿ ಬರಲು ಸಾಧ್ಯವಾಗಿದೆ. ಈ ರೀತಿಯ ಕಥೆಗಳು ಬಂದಾಗ ನಾವು ಅಂದವಾಗಿ ಕಾಣಿಸಲು ಪ್ರಯತ್ನಿಸಬೇಕು ಎನ್ನುವ ಭಾವ ಮೂಡುತ್ತದೆ.
* ರೋಮ್ಯಾಂಟಿಕ್ ಸೀನ್ ನೋಡಿ ವೈಫ್ ಏನು ಅಂದರು?
ಪ್ರೇಮ್: ಅವಳದ್ದು ಡೆಡ್ ರಿಯಾಕ್ಷನ್. ಚಿತ್ರದಲ್ಲಿ ಹೀರೋಯಿನ್ ನ್ನು ಟಚ್ ಮಾಡುವ ಸಂದರ್ಭಗಳೇ ಇಲ್ಲ. ಸಿನಿಮಾದಲ್ಲಿ ರೋಮ್ಯಾಂಟಿಕ್ ಗಿಂತ ಹೆಚ್ಚಿನದು ಇನ್ನೇನು ಇದೆ ಅಂದಾಗ ಅದೇ ಖುಷಿ ನೀಡಿತು.
* ಚಿತ್ರಕ್ಕೆ ನಾಯಕ ನಟಿಯಾಗಿ ಆಯ್ಕೆಯಾದಾಗ ಏನು ಅನಿಸಿತು?
ಬೃಂದಾ ಆಚಾರ್ಯ: ತುಂಬಾ ಖುಷಿ ಅನಿಸಿತು. ಈ ಚಿತ್ರವನ್ನು ನಾನೇ ಮಾಡಬೇಕು. ನನಗೇ ಸಿಗಬೇಕು ಅನಿಸಿತ್ತು. ಸ್ಟೋರಿ ಕೇಳಿದಾಗ ತುಂಬಾ ಎಮೋಷನಲ್ ಆಗಿದ್ದೆ. ಸ್ಯಾಂಡಲ್ ವುಡ್ ದೆಬ್ಯೂನಲ್ಲಿ ಇದು ನಿಜಕ್ಕೂ ಉತ್ತಮ ಚಿತ್ರ. ಬೆಸ್ಟ್ ಸ್ಟೋರಿ.
* ರೋಮ್ಯಾನ್ಸ್ ಇಲ್ಲದ ಈ ಚಿತ್ರದಲ್ಲಿ ನಟಿಸುವಾಗ ಏನು ಅನಿಸಿತು?
ಬೃಂದಾ ಆಚಾರ್ಯ: ಇದೊಂದು ಡಿಫರೆಂಟ್ ಲವ್ ಸ್ಟೋರಿ. ಈ ರೀತಿಯ ಸಿನಿಮಾ ಮಾಡುತ್ತಿರುವುದು ನೋಡಿದಾಗ ನಾನು ಬ್ಲೆಸೆಡ್ ಅನಿಸುತ್ತದೆ. ಸೆಟ್ ನಲ್ಲಿ ನನ್ನನ್ನು ಏಂಜಲ್ ಅಂದೇ ಕರೆಯುತ್ತಿದ್ದರು. ಈಗಲೂ ಮೆಸೇಜ್ ಮಾಡುವಾಗ ಹಾಗೇ ಚಿತ್ರತಂಡದವರು ಅಂತಾರೆ.
*ಪ್ರೇಮ್ ಜೊತೆ ನಟನೆಯ ಅನುಭವ ಹೇಗಿತ್ತು?
ಮಾಸ್ಟರ್ ಆನಂದ್: ನೆನಪಿರಲಿ ಚಿತ್ರ ಬಂದ ಬಳಿಕ ಮನೆಯವರೆಲ್ಲರೂ ಪ್ರೇಮ್ ಫ್ಯಾನ್ಸ್ ಆಗಿದ್ದರು. ಅವರ ಜೊತೆ ಇಲ್ಲಿಯವರೆಗೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಈ ಚಿತ್ರ ಪಿಚ್ಚರ್ ಆಫ್ ಬ್ಯೂಟಿ ಅಂಡ್ ಇಂಟೆಲಿಜೆನ್ಸ್ ಎನ್ನುವ ರೀತಿಯ ಸ್ಕ್ರಿಪ್ಟ್ ಇದು. ಈ ಚಿತ್ರದಲ್ಲಿ ಪ್ರೀತಿಗೆ ಇರುವ ಪ್ರಾಮುಖ್ಯತೆ ಸ್ನೇಹಕ್ಕೂ ಇದೆ. ಕಥೆ ಕೇಳಿದ ಬಳಿಕ ಚಿತ್ರವನ್ನು ನಾನು ಮಾಡಲೇಬೇಕು ಅಂದುಕೊಂಡೆ.
* ಈ ಚಿತ್ರ ಮೂಡಿ ಬಂದದ್ದು ಹೇಗೆ?
ಡಾ. ರಾಘವೇಂದ್ರ: ಫ್ರೀ ಟೈಮ್ ನಲ್ಲಿ ಸುಮ್ಮನೆ ಗೀಚಿದ್ದು ಈಗ ಕಸದಿಂದ ರಸ ಎನ್ನುವಂತೆ ಆಗಿದೆ. ಪೇಷಂಟ್ ಹೋದ ಬಳಿಕ ಲಂಚ್ , ಟೀ ಬ್ರೇಕ್ ನಲ್ಲಿ ಬರೆದ ಸ್ಕ್ರಿಪ್ಟ್ ಇದು. ಬರೆದದ್ದನ್ನು ಮೇಲ್ ಮಾಡುತ್ತಿದ್ದೆ. ನಾಲ್ಕು ವರ್ಷದ ಕಾಲ ಬರೆದು ತಯಾರಾದ ಸ್ಕ್ರಿಪ್ಟ್ ಇದು.
* ಸಿನಿಮಾದ ಕಥೆ ಬಗ್ಗೆ ಏನು ಹೇಳುತ್ತೀರಿ?
ರಾಘವೇಂದ್ರ: ಶಾಲೆಯ ದಿನಗಳಲ್ಲಿ ಎಲ್ಲರಿಗೂ ಕ್ರಶ್ ಆಗಿರುತ್ತದೆ. ಸಿನಿಮಾ ನೋಡಿದರೆ ಎಲ್ಲರೂ ಇದು ನನ್ನ ಕಥೆ ಅಂದುಕೊಳ್ಳಬೇಕು. ಎಲ್ಲೋ ಒಂದು ಕಡೆ ಚಿತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಇದು ಎಲ್ಲರ ಲವ್ ಸ್ಟೋರಿ ಅನ್ನಬಹುದು.
* ಸ್ನೇಹಿತನ ಪಾತ್ರಕ್ಕೆ ಮಾಸ್ಟರ್ ಆನಂದ್ ಆಯ್ಕೆ ಯಾಕೆ?
ರಾಘವೇಂದ್ರ: ಸಿನಿಮಾ ಮಾಡುವಾಗ ಪ್ರೇಮ್ ಅವರೇ ಚಿತ್ರದ ನಾಯಕ ಆಗಬೇಕೆಂದು ನಿರ್ಧಾರ ಮಾಡಿರಲಿಲ್ಲ. ಆದರೆ ಸ್ನೇಹಿತನ ಪಾತ್ರಕ್ಕೆ ಸ್ಕ್ರಿಪ್ಟ್ ಬರೆಯುವಾಗ ಮಾಸ್ಟರ್ ಆನಂದ್ ಅವರೇ ಪಾತ್ರ ನಿರ್ವಹಿಸಬೇಕು ಎಂದು ನಿರ್ಧರಿಸಿದ್ದೆ. ನಾನು ಅವರ ದೊಡ್ಡ ಅಭಿಮಾನಿ. ವಿದ್ಯಾರ್ಥಿದೆಸೆಯಲ್ಲಿ ಅವರ ಎರಡು ಧಾರಾವಾಹಿಗಳನ್ನು ನೋಡುತ್ತಿದ್ದೆ. ಅವರ ನಗಿಸುವ ಕಲೆ ಅದ್ಭುತವಾದದ್ದು.
Be the first to comment