ಬೆಳ್ಳಿ ಪರದೆ ಮೇಲೆ ಸಾಲು ಸಾಲಾಗಿ ಚಿತ್ರಗಳು ಬಿಡುಗಡೆಯಾಗುತ್ತಿದೆ. ಈಗ ಆ ಸಾಲಿನಲ್ಲಿ ಪ್ರೇಕ್ಷಕರ ಗಮನ ಸೆಳೆಯಲು ಭೂಗತ ಲೋಕದಲ್ಲಿ ಕಥಾನಕದೊಂದಿಗೆ ಭಾವನಾತ್ಮಕ ಸನ್ನಿವೇಶಗಳ ಬೆಸೆದುಕೊಂಡು ಹಾಸ್ಯ ಮಿಶ್ರಿತ ಅಂಶದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ “ಹಿಟ್ಲರ್” ಪ್ರವೇಶ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ಈ ಚಿತ್ರವು ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.
ಗಾನಶಿವ ಮೂವೀಸ್ ಮುಖಾಂತರ ಮಮತಾಲೋಹಿತ್ ನಿರ್ಮಾಣ ಮಾಡಿರುವ “ಹಿಟ್ಲರ್” ಚಿತ್ರದ ಟ್ರೈಲರ್ನ್ನು ಮದಗಜ ನಿರ್ದೇಶಕ ಮಹೇಶ್ಕುಮಾರ್ ಬಿಡುಗಡೆ ಮಾಡಿ ಮಾತನಾಡುತ್ತಾ ನಾನು ಹಾಗೂ ನಿರ್ದೇಶಕ ಕಿನ್ನಲ್ ರಾಜ್ ಬಹಳ ವರ್ಷದ ಗೆಳೆಯರು. ನಾವು ಚಿತ್ರರಂಗಕ್ಕೆ ಒಟ್ಟಿಗೆ ಬಂದೆವು. ಇಂದು ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರ ಯಶಸ್ವಿ ಆಗಲಿ ಇನ್ನೂ ಹಲವಾರು ಚಿತ್ರಗಳು ಅವರ ಸಾರಥ್ಯದಲ್ಲಿ ಬರಲಿ ಎಂದು ಶುಭ ಕೋರಿದರು.
ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನ ಬರೆದoತಹ ಕೆ.ಜಿ.ಎಫ್ ಚಿತ್ರಕ್ಕೆ ತಾಯಿ ಮಗುವಿನ ಮಮತೆಯ ಹಾಡನ್ನ ರಚಿಸಿದಂಥ ಕಿನ್ನಾಳ್ರಾಜ್ ಈ ಹಿಟ್ಲರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಈ ಚಿತ್ರದ ಕುರಿತು ಮಾತನಾಡುತ್ತಾ ಈ ಚಿತ್ರದ ಕಥೆ ಕಾಲ್ಪನಿಕವಾದರೂ ರೌಡಿಸಂ ಕಥೆ ಯಲ್ಲಿ ಮನಮುಟ್ಟುವ ಅಂಶವನ್ನು ಕೂಡ ಬೆಸೆದ್ದೇನೆ.
ನಾಯಕ ತನ್ನ ಕುಟುಂಬದಲ್ಲಿ ತನ್ನಿಂದ ಆದ ತಪ್ಪಿಗೆ, ವೈಯಕ್ತಿಕ ಕಾರಣಗಳಿಗೋಸ್ಕರ ಕುಟುಂಬ ಹಾಳಾಗಬಾರದೆಂಬ ಮಾನಸಿಕ ತಳಮಳವನ್ನು ಹೇಳಲಾಗಿದೆ. ಕಥಾನಾಯಕ ಶುರುವುನಿಂದಲೇ ರೌಡಿಯಾಗಿರುತ್ತಾನೆ. ಕರುಣೆ ಅನ್ನುವುದನ್ನು ತೋರಿಸಿಲ್ಲ. ಆತನು ತೊಳಲಾಟದಲ್ಲಿ ಸಿಕ್ಕಿ ಹಾಕಿಕೊಂಡು, ರೌಡಿಸಂನಿಂದ ಹೊರಗಡೆ ಬಂದರೆ ಸಮಾಜ ಬಿಡುತ್ತದಾ, ಅಥವಾ ಅವನು ಬದುಕುತ್ತಾನಾ? ಅವೆಲ್ಲಾವನ್ನು ಹಂಗೆ ನಿಭಾಯಿಸುತ್ತಾನೆ ಎನ್ನವುದು ಸಾರಾಂಶವಾಗಿದೆ ಎಂದರು.
ಇನ್ನು ಈ ಚಿತ್ರದ ನಾಯಕ ಲೋಹಿತ್ ಮಾತನಾಡುತ್ತಾ ನಮ್ಮ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣ ಮಾಡಿದ್ದು , ನನ್ನ ಪತ್ನಿ ಮಮತಾ ಲೋಹಿತ್ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೌಡಿಸಂ ಸಬ್ಜೆಕ್ಟ್ ಆಗಿದ್ದರೂ, ಫ್ಯಾಮಿಲಿ ಸೆಂಟಿಮೆಂಟ್ ಇದೆ.
ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕೆಲವೇ ನಿಮಿಷಗಳು ಬಂದರೂ ಅದಕ್ಕೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಚಿತ್ರದಲ್ಲಿ ವಿಜಯ್ ಚೆಂಡೂರ್ ಪಾತ್ರ ಬಹಳ ವಿಶೇಷವಾಗಿದ್ದು ,ಅವರ ಪಾತ್ರ ಹಾಗೂ ತಾಯಿ ಪಾತ್ರ ಮಾಡಿರುವವರು ಹೂರತುಪಡಿಸಿ ಉಳಿದಂತೆ ಎಲ್ಲರೂ ವಿಲನ್ಗಳು ಎಂದೇ ಹೇಳಬಹುದು ಎಂದರು.
ಇನ್ನು ಈ ಚಿತ್ರದಲ್ಲಿ ನಾಯಕಿ ಯಾಗಿ ಕಾಣಿಸಿಕೊಂಡಿರುವ ಸಸ್ಯ , ಅಣ್ಣನ ಪಾತ್ರ ಮಾಡಿರುವ ವಿಜಯ್ಚೆಂಡೂರು, ಭ್ರಷ್ಟ ಪೋಲೀಸ್ ಅಧಿಕಾರಿ ಗಣೇಶ್ರಾವ್, ಖಳನಾಗಿರುವ ವೈಭವ್ನಾಗರಾಜ್ ರವರು ತಮ್ಮ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.
ಇನ್ನೂ ಉಳಿದಂತೆ ವರ್ಧನ್ ತೀರ್ಥಹಳ್ಳಿ, ಮನಮೋಹನ್ ರೈ, ಬಲರಾಜವಾಡಿ, ಶಶಿಕುಮಾರ್, ವೇದಹಾಸನ್, ಮುಂತಾದವರು ನಟಿಸಿದ್ದಾರೆ. ಸಂಗೀತ ಆಕಾಶ್ಪರ್ವ, ಛಾಯಾಗ್ರಹಣ ಜಿ.ವಿ.ನಾಗರಾಜ್ ಕಿನ್ನಾಳ ಗಣೇಶ್ , ಸಂಕಲನ ಗಣೇಶ್ತೋರಗಲ್, ಸಾಹಸ ಚಂದ್ರುಬಂಡೆ ಅವರದಾಗಿದೆ. ಒಟ್ಟಾರೆ ಚಿತ್ರತಂಡ ಬಹಳಷ್ಟು ನಿರೀಕ್ಷೆಯೊಂದಿಗೆ ಈ ಚಿತ್ರವನ್ನ ಸಿದ್ಧಪಡಿಸಿದ್ದು , ಇದೇ ವಾರ ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಿದೆ.
Be the first to comment