ಸುಮಾರು ವರ್ಷಗಳಿಂದ ಚಿತ್ರರಂಗ ಹಾಗೂ ಸಾಂಸ್ಕೃತಿಕ ರಂಗದ ಹಲವು ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಮನೆಮಾತಗಿರುವವರು ದಿವ್ಯ ಆಲೂರು.ಈಗ ಅವರು “ಕನ್ನಿಕೇರಿ ಹುಡುಗಿ” ಎಂಬ ಮೂಲ ಜನಪದ ಹಾಡನ್ನು ಈಗಿನ ಯುವಜನತೆಯ ಮನಸ್ಸಿಗೆ ಹಿಡಿಸುವ ಹಾಗೆ ನಿರ್ಮಿಸಿದ್ದಾರೆ. ಈ ಹಾಡನ್ನು ಅವರೆ ಸ್ವತ ಹಾಡಿ, ಅಭಿನಯಿಸಿರುವುದು ವಿಶೇಷ. ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.
ನಾನು ಖ್ಯಾತ ಜಾನಪದ ಗಾಯಕ ಹಾಗೂ ಸಾಹಿತಿ ಆಲೂರು ನಾಗಪ್ಪ ಅವರ ಪುತ್ರಿ. ಮೊದಲಿನಿಂದಲೂ ಗಾಯನದಲ್ಲಿ ಆಸಕ್ತಿ. ಚಿಕ್ಕಂದಿನಲ್ಲಿ ಅಪ್ಪನೊಂದಿಗೆ ಹಾಡುತ್ತಿದೆ. ಜನಪದದಲ್ಲಿ ಡಿಗ್ರಿ ಸಹ ಮಾಡಿದ್ದೇನೆ.
ನಂತರ ನಿರೂಪಣೆಯ ಒತ್ತಡದಿಂದ ಹಾಡು ಹೆಚ್ಚು ಹೇಳುತ್ತರಲಿಲ್ಲ. ಈ ವಿಷಯವನ್ನು ನನ್ನ ಪತಿ ಆದರ್ಶ್ ಬಳಿ ಹೇಳಿದೆ. ಅವರು ನನ್ನ ತಂದೆಯವರು ಜನಪ್ರಿಯಗೊಳಿಸಿದ “ಕನ್ನಿಕೇರಿ ಹುಡುಗಿ” ಹಾಡನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸೋಣ ನೀನು ಹಾಡು ಎಂದರು. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ.
ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಾಜಶೇಖರ್ ಛಾಯಾಗ್ರಹಣ ಹಾಗೂ ವಿಶ್ವ ಸಂಕಲನ ಈ ವಿಡಿಯೋ ಸಾಂಗ್ ಗಿದೆ. ಬಿಲಿವ್ ಸಂಸ್ಥೆ ಪ್ರದೀಪ್ ಅವರ ಉಪಕಾರ ಮರೆಯಲಾಗದು. ನನ್ನ ತಂದೆ ಆಲೂರು ನಾಗಪ್ಪ, ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್ ಗೌಡ ಹಾಗೂ ಕನ್ನಡವೇ ಸತ್ಯ ರಂಗಣ್ಣ ಅವರು ಇಲ್ಲಿಗೆ ಆಗಮಿಸಿ, ಶುಭ ಹಾರೈದಿದ್ದಕ್ಕೆ ತಂಬು ಹೃದಯದ ಧನ್ಯವಾದಗಳು ಎಂದರು ದಿವ್ಯ ಆಲೂರು.
ದಿವ್ಯ ಅವರ ಈ ಪ್ರಯತ್ನಕ್ಕೆ ಆದಿಚುಂಚನಗಿರಿ ಶ್ರೀಗಳು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂತಾದ ಗಣ್ಯರು ಶಭ ಕೋರಿದ್ದಾರೆ. ಆದರ್ಶ್ ತಮ್ಮ ಹಾಡಿನ ಮೂಲಕ ಕಾರ್ಯಕ್ರಮ ಆರಂಭಿಸಿದರು. ವಿಡಿಯೋ ಸಾಂಗ್ ಗೆ ಕಾರ್ಯ ನಿರ್ವಹಿಸಿರುವ ತಂಡದವರು ಹಾಗೂ ಮುಖ್ಯ ಅತಥಿಗಳು ಹಾಡಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
Be the first to comment