ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಸ್ಥಗಿತ ಆಗಿದ್ದ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರದ ಮರು ಪ್ರದರ್ಶನ ಆರಂಭ ಆಗಿದ್ದು ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಪುನೀತ್ ರಾಜ್ ಕುಮಾರ್ ಗೆ ಗೌರವ ವಿದಾಯ ಸಲ್ಲಿಸುವ ನಿಟ್ಟಿನಲ್ಲಿ ಭಜರಂಗಿ 2 ನಿರ್ಮಾಪಕರು ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದರು. ಈಗ ಚಿತ್ರ ಮತ್ತೆ ಪ್ರದರ್ಶನಗೊಳ್ಳುತ್ತಿದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಮುಂತಾದ ಕೇಂದ್ರಗಳಲ್ಲಿ ಪ್ರತಿ ಶೋಗೂ ಶೇ.80ರಷ್ಟು ಪ್ರೇಕ್ಷಕರ ಹಾಜರಾತಿ ಇದೆ ಎಂದು ಚಿತ್ರ ತಂಡ ಹೇಳಿದೆ.
ನಿರ್ಮಾಪಕರಿಗೆ ನಷ್ಟ ಆಗಬಾರದು ಎಂದು ಶಿವರಾಜ್ ಕುಮಾರ್ ಹೇಳಿದ ಬಳಿಕ ರಾಜ್ಯದಲ್ಲಿ 375ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಭಜರಂಗಿ 2′ ಚಿತ್ರ ಮರು ಪ್ರದರ್ಶನ ಆರಂಭವಾಗಿದೆ.
“ದೀಪಾವಳಿ ಹಬ್ಬದ ಅಂಗವಾಗಿ ರಜೆ ದಿನಗಳಿವೆ. ಈ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರು ತುಂಬಿಕೊಳ್ಳುವ ನಿರೀಕ್ಷೆ ಇದೆ. ಸಿನಿಮಾ ನೋಡಿದ ಎಲ್ಲರೂ ಸಿನಿಮಾ ಮೆಚ್ಚಿಕೊಳ್ಳುತ್ತಿದ್ದಾರೆ’ ಎಂದು ನಿರ್ದೇಶಕ ಎ ಹರ್ಷ ಹೇಳಿದ್ದಾರೆ.
ಅ.29ರಂದು ಪುನೀತ್ ನಿಧನದಿಂದ ಚಿತ್ರರಂಗ ಸ್ಥಗಿತವಾಗಿತ್ತು. ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳ ಪ್ರದರ್ಶನವೂ ನಿಂತಿತ್ತು. ಈಗ ಮತ್ತೆ ಎಲ್ಲಾ ಚಿತ್ರಗಳ ಪ್ರದರ್ಶನ ಆರಂಭಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅ.29ರಂದು ಪುನೀತ್ ರಾಜ್‌ಕುಮಾರ್ ನಿಧನರಾದ ಸುದ್ದಿ ಕೇಳಿ ಜನ ಅರ್ಧದಲ್ಲಿಯೇ ಸಿನಿಮಾ ನೋಡುವುದನ್ನು ಬಿಟ್ಟು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿ ನೋಡಲು ಆಸ್ಪತ್ರೆ ಕಡೆ ಓಡಿ ಬಂದಿದ್ದರು.
https://in.bookmyshow.com/buytickets/bhajarangi-2-bengaluru/movie-bang-ET00135389-MT/20211103
Be the first to comment