ಬಡವ ರಾಸ್ಕಲ್ ಚಿತ್ರದ ವಿಶೇಷ ಟೀಸರ್ ರಿಲೀಸ್

ಬಡವ ರಾಸ್ಕಲ್ ಚಿತ್ರತಂಡ ಸಿನಿಮಾದ ಪಾತ್ರ ಪರಿಚಯ ಇರುವ ವಿಶೇಷ ಟೀಸರ್ ಬಿಡುಗಡೆ ಮಾಡಿದ್ದು, ಟೀಸರ್ ಮೂಲಕ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಈ ಟೀಸರ್ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಧಾರಿಗಳನ್ನು ಒಂದೊಂದಾಗಿ ವಿವರಿಸುತ್ತಾ ಹೋಗುತ್ತದೆ. ಕೊನೆಯದಾಗಿ ಶಂಕರ್ ಅಲಿಯಾಸ್ ಬಡವ ರಾಸ್ಕಲ್ ಎನ್ನುವ ಬೋರ್ಡ್‌ ಹಿಡಿದು ಧನಂಜಯ್‌ ಎಂಟ್ರಿ ಕೊಡುತ್ತಾರೆ. ಅಲ್ಲಿಗೆ ಬಡವ ರಾಸ್ಕಲ್ ಎನ್ನುವುದು ರೌಡಿ ಒಬ್ಬನ ಹೆಸರು ಎಂದು ಟೈಟಲ್ ನ ಅರ್ಥ ನೋಡುಗರಿಗೆ ಗೊತ್ತಾಗುತ್ತದೆ.

ಅಪರಾಧ ಲೋಕದ ಈ ಸಿನಿಮಾದಲ್ಲಿ ಅಮೃತ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದು , ಡಾಲಿ ಪಿಚ್ಚರ್ ಚಿತ್ರ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಪ್ರೀತ ಜಯರಾಮ್ ಛಾಯಗ್ರಹಣ, ವಾಸುಕಿ ವೈಭವ್ ಸಂಗೀತ ಇದೆ. ನಾಗಭೂಷಣ್, ರಂಗಾಯಣ ರಘು, ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬಡವ ರಾಸ್ಕಲ್ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಿದ್ದು, ಡಿಸೆಂಬರ್ 24ಕ್ಕೆ ಕ್ರಿಸ್ಮಸ್ ಪ್ರಯುಕ್ತ ಚಿತ್ರ ತೆರೆ ಕಾಣಲಿದೆ. ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ ಕೂಡ ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಪುಷ್ಪ ಚಿತ್ರದಲ್ಲಿ ಧನಂಜಯ್‌ ಅವರದ್ದು ಪ್ರಮುಖ ಪಾತ್ರ ಇದ್ದು, ಈಗಾಗಲೇ ಧನಂಜಯ್‌ ಲುಕ್‌ ರಿಲೀಸ್‌ ಆಗಿದೆ.

ಧನಂಜಯ್ ಅಭಿನಯದ ರತ್ನನ್ ಪ್ರಪಂಚ, ಸಲಗ ಚಿತ್ರಗಳು ಈಗಾಗಲೆ ಬಿಡುಗಡೆಯಾಗಿದ್ದು ಧನಂಜಯ್ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಧನಂಜಯ್ ಹೆಡ್ ಬುಷ್ ಚಿತ್ರ ನಿರ್ಮಿಸುವ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಧನಂಜಯ್ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!