ನವೆಂಬರ್ ನಲ್ಲಿ ಅವತಾರ ಪುರುಷ ತೆರೆಗೆ

ಶರಣ್ ನಟನೆಯ ‘ಅವತಾರ ಪುರುಷ’ ಚಿತ್ರ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಆಶಿಕಾ ರಂಗನಾಥ್ ಹಾಗೂ ಶರಣ್ ಜೋಡಿಯಾಗಿರುವ ಈ ಸಿನಿಮಾ ಕೆಜಿಫ್ ಮಾದರಿಯಲ್ಲಿ ಇರಲಿದೆ. ಈ ಸಿನಿಮಾ ಕೂಡಾ 2 ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ದೀಪಾವಳಿಗೂ ಮೊದಲೇ ಸಿನಿಮಾ ತಂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಹೊರಟಿದೆ. ಈ ವೇಳೆ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ.

ಸಿನಿಮಾ ಹಾರರ್, ಕಾಮಿಡಿ, ಎಲಿಮೆಂಟ್ ಜೊತೆಗೆ ಥ್ರಿಲ್ಲಿಂಗ್ , ಸಸ್ಪೆನ್ಸ್ , ಟ್ವಿಸ್ಟ್ ಗಳ ಹೂರಣ ಹೊಂದಿದೆ. ನಿರ್ದೇಶಕ ಸಿಂಪಲ್ ಸುನಿ “ಅವತಾರ ಪುರುಷ” ನಿರ್ದೇಶನ ಮಾಡಿದ್ದು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಈ ಚಿತ್ರ ಶರಣ್ ಅವರ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್‌ನ ಸಿನಿಮಾ ಆಗಿದೆ ಎನ್ನಲಾಗುತ್ತಿದೆ.

ಸಿನಿಮಾದಲ್ಲಿ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ದೊಡ್ಡ ತಾರಾಬಳಗ ಅಭಿನಯ ಮಾಡಿದೆ. ಕೆಜಿಎಫ್‌ ಸೂತ್ರ ಅಳವಡಿಸಿಕೊಳ್ಳುತ್ತಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲೇ ಈ ಚಿತ್ರದ ಬಗ್ಗೆ ಯೋಜನೆ ಹಾಕಿಕೊಂಡಿದೆ. ಈ ಚಿತ್ರ ನಟ ಶರಣ್ ಅವರಿಗೆ ಹೊಸ ಮೈಲೇಜ್ ನೀಡುವ ಭರವಸೆಯನ್ನು ಚಿತ್ರ ತಂಡ ಹೊಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!