ನ. 12ಕ್ಕೆ ಟಾಮ್ ಅಂಡ್ ಜೆರಿ ರಿಲೀಸ್

ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಟಾಮ್ ಅಂಡ್ ಜೆರಿ ಸಿನಿಮಾ ನವೆಂಬರ್ 12ರಂದು ರಿಲೀಸ್ ಆಗಲಿದೆ.

ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಿರುವ ಚಿತ್ರ ತಂಡ ನವೆಂಬರ್ 2 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಟಾಮ್ ಅಂಡ್ ಜೆರಿ ಚಿತ್ರದಲ್ಲಿ ಗಂಟುಮೂಟೆ ಸಿನಿಮಾ ಖ್ಯಾತಿಯ ನಿಶ್ಚಿತ್ ಕೊರೊಡಿ, ಮಾಯಾಬಜಾರ್ ಖ್ಯಾತಿಯ ನಾಯಕಿ ಚೈತ್ರಾ ರಾವ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ತಾರಾ, ಜೈ ಜಗದೀಶ್, ರಂಗಾಯಣ ರಘು, ಕಡ್ಡಿಪುಡಿ ಚಂದ್ರು, ಪದ್ಮಜಾ ರಾವ್, ಗುಣಶೇಖರ್, ಪ್ರಕಾಶ್ ತುಂಬಿನಾಡು ಮುಂತಾದವರು ತಾರಾಗಣದಲ್ಲಿ ಇದ್ದಾರೆ.

ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಮ್ಯಾಥ್ಯೂಸ್ ಮನೋಹರ್ ಹಾಡು ಸಂಯೋಜನೆ ಮಾಡಿದ್ದಾರೆ. ಸಿದ್ ಶ್ರೀರಾಮ್ ಹಿನ್ನೆಲೆ ಗಾಯನ ಮಾಡಿದ್ದಾರೆ. ಹಾಯಾಗಿದೆ ಎದೆಯೊಳಗೆ ಹಾಡು ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ವೈರಲ್ ಆಗಿದ್ದು ಈ ಚಿತ್ರದ ಜನಪ್ರಿಯತೆಯನ್ನು ಹೆಚ್ಚಿಸಿದೆ. ಸಿನಿಮಾದ ಇನ್ನೊಂದು ಹಾಡು, ಕಾದಲ್ ನೀ ಅನ್ನಲೆ ಕೂಡಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಚಿತ್ರಕ್ಕೆ ಛಾಯಾಗ್ರಹಣವನ್ನು ಸಂಕೇತ್ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!