ರಂಗಸಮುದ್ರ ಮೋಷನ್ ಪೋಸ್ಟರ್ ರಿಲೀಸ್

ರಾಜ್ ಕುಮಾರ್ ಅಸ್ಕಿ ನಿರ್ದೇಶನದ ರಂಗಸಮುದ್ರ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ.

ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಕೊಣನೂರು ಹೊಯ್ಸಳ ನಿರ್ಮಿಸುತ್ತಿರುವ ರಂಗ ಸಮುದ್ರ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ರಂಗಾಯಣ ರಘು ಇದೇ ಮೊದಲ ಬಾರಿಗೆ ಕಾಮಿಡಿಯಿಂದ ಹೊರತಾದ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಸಂಗೀತ ನಿರ್ದೇಶಕ ದೇಸೀ ಮೋಹನ್ ಸಂಗೀತ ಗಮನ ಸೆಳೆಯುತ್ತಿದೆ.

ಅಧರ್ಮದ ಕೇಕೆ ಹೆಚ್ಚಾದಾಗ, ಧರ್ಮದ ಕಹಳೆ ಎತ್ತು…. ಎಂಬ ಹಿನ್ನೆಲೆ ಧ್ವನಿಯೊಂದಿಗೆ ತೆರೆದುಕೊಳ್ಳುವ ಮೋಷನ್ ಪೋಸ್ಟರ್ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತದೆ. ಇದನ್ನು ಝೇಂಕಾರ್ ಮ್ಯೂಸಿಕ್ ಅ.15ರಂದು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ಹೊಯ್ಸಳ ಮೂವೀಸ್, ಹೊಯ್ಸಳ ಕ್ರಿಯೇಷನ್ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಆರ್.ಗಿರಿ ಸಿನಿಮಾಟೋಗ್ರಫಿ, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ, ಶ್ರೀಕಾಂತ್ ರಂಗಸಮುದ್ರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ದಿವ್ಯಾ ಗೌಡ, ಸಂಪತ್ ರಾಜ್, ಕಾರ್ತಿಕ್, ಸ್ಕಂದ, ಮಹೇಂದ್ರ ಇತರರು ನಟಿಸಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!